Ad imageAd image
- Advertisement -  - Advertisement -  - Advertisement - 

ಕಾರ್ಗಿಲ್ ವಿಜಯೋತ್ಸವದ ರಜತ ಸಂಭ್ರಮ ಆಚರಣೆ ಕಾರ್ಗಿಲ್ ಹುತಾತ್ಮ ಶಿವಬಸಯ್ಯ ಕುಲಕರ್ಣಿ ವೀರಯೋಧನಿಗೆ ಸೈನಿಕರಿಂದ ನಮನ.

Bharath Vaibhav
ಕಾರ್ಗಿಲ್ ವಿಜಯೋತ್ಸವದ ರಜತ ಸಂಭ್ರಮ ಆಚರಣೆ ಕಾರ್ಗಿಲ್ ಹುತಾತ್ಮ ಶಿವಬಸಯ್ಯ ಕುಲಕರ್ಣಿ ವೀರಯೋಧನಿಗೆ ಸೈನಿಕರಿಂದ ನಮನ.
WhatsApp Group Join Now
Telegram Group Join Now

ಬಾದಾಮಿ :- ಯೋಧರ ಗ್ರಾಮ ಚೊಳಚ ಗುಡ್ಡ ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸವದ ರಜತ ಸಂಭ್ರಮ ಆಚರಣೆ ಕಾರ್ಗಿಲ್ ಹುತಾತ್ಮ ಶಿವಬಸಯ್ಯ ಕುಲಕರ್ಣಿ ವೀರಯೋಧನಿಗೆ ಸೈನಿಕರಿಂದ ನಮನ.

ಭಾರತೀಯ ಇತಿಹಾಸದಲ್ಲಿ ಕಾರ್ಗಿಲ್ ಯುದ್ಧ ಭಾರತೀಯ ಸೈನಿಕರು ಹೋರಾಟ ಮಾಡಿ ವಿಜಯದ ಪತಾಕೆ ಹಾರಿಸಿದ್ದು ಅದು ಎಂದೂ ಮರೆಯಾಲಾರದ ಇತಿಹಾಸ. ಆ ಕೀರ್ತಿ ನಮ್ಮ ಭಾರತೀಯ ಸೈನಿಕರಿಗೆ ಸಲ್ಲುತ್ತದೆ.

ಅದೇ ಕಾರ್ಗಿಲ್ ಯುದ್ಧದಲ್ಲಿ ಪ್ರಥಮದಲ್ಲಿಯೇ ಪಾಕಿಸ್ತಾನಿ ಸೈನಿಕರ ಜೊತೆ ಹೋರಾಡಿ ವೀರಮರಣವನ್ನಪ್ಪಿದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಶಿವಬಸಯ್ಯ. ಬಸಯ್ಯ ಕುಲಕರ್ಣಿ ವೀರಯೋಧನಿಗೆ ಇಂದು ಮಾಜಿ ಯೋಧರ ಕ್ಷೇಮಭಿವೃದ್ಧಿ ಸಂಘ ಹಾಗೂ ತಾಲೂಕಿನ ಮಾಜಿ ಸೈನಿಕರು ಹಾಗೂ ಸೇವೆ ಸಲ್ಲಿಸುತ್ತಿರುವ ಸೈನಿಕರು ಸೇರಿ ಕಾರ್ಗಿಲ್ ವಿಜಯೋತ್ಸವದ ರಜತ ಸಂಭ್ರಮ ಆಚರಣೆ ಮೂಲಕ ಧ್ವಜರೋಹಣ ನೆರವೇರಿಸಿ ರಾಷ್ಟ್ರಗೀತೆ ಹಾಡಿ ಹುತಾತ್ಮ ಯೋಧನಿಗೆ ಗೌರವನಮನ ಸಲ್ಲಿಸಲಾಯಿತು.ಬಾಗಲಕೋಟೆ ಜಿಲ್ಲೆಯಲ್ಲಿಯೇ ಹೆಚ್ಚು ಸೈನಿಕರನ್ನು ದೇಶಕ್ಕೆ ಸೇವೆ ಸಲ್ಲಿಸಲು ನೀಡಿದ ಹೆಗ್ಗಳಿಕೆಗೆ ಚೊಳಚಗುಡ್ಡ ಗ್ರಾಮ ಪಾತ್ರವಾಗಿದೆ ಎನ್ನಲಾಗ್ತಾ ಇದೆ.

ಧ್ವಜರೋಹಣ ಕಾರ್ಯಕ್ರಮಕ್ಕೆ ಹಾಲುಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಾಳಕೇರಿ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹಾಗೂ ವೀರಯೋಧನ ಧರ್ಮಪತ್ನಿ ನಿರ್ಮಲಾ ಹಾಗೂ ಜೆ ಡಿ ಎಸ್ ಪಕ್ಷದ ಜಿಲ್ಲಾಧ್ಯಕ್ಷ ಯುವಮುಖಂಡ ಹನಮಂತ ಮಾವಿನಮರದ ಹಾಗೂ ಅವರು ನೂರಾರು ಸೈನಿಕರು ಹಾಗೂ ಎನ್ ಸಿ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೈಸ್ಕೂಲ್ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕಿಕ್ಕಿರಿದ ಜನಸಾಗರದ ನಡುವೆ ವೀರಯೋಧನಿಗೆ ಗೌರವನಮನ ಸಲ್ಲಿಸಿದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
Share This Article
error: Content is protected !!