Ad imageAd image

ಗೊರಬಾಳದ ಕರಿಯಪ್ಪ ತಾತನ ಅದ್ದೂರಿ ಜಾತ್ರೋತ್ಸವ

Bharath Vaibhav
ಗೊರಬಾಳದ ಕರಿಯಪ್ಪ ತಾತನ ಅದ್ದೂರಿ ಜಾತ್ರೋತ್ಸವ
WhatsApp Group Join Now
Telegram Group Join Now

ಇಳಕಲ್ : ಸಮೀಪದ ಗೊರಬಾಳ ಗ್ರಾಮದ ಕರಿಯಪ್ಪ ತಾತನ ಜಾತ್ರೆ ಅದ್ದೂರಿಯಾಗಿ ಜರುಗಿತು ಬೆಳಗ್ಗೆ ಅಭಿಷೇಕದೊಂದಿಗೆ ಪ್ರಾರಂಭವಾದ ಜಾತ್ರಾ ಕಾರ್ಯಕ್ರಮಗಳು ಅಭಿಷೇಕದ ನಂತರ ಅನೇಕ ಪೂಜಾ ಕೈಕಂರೈಗಳದೊಂದಿಗೆ ಗ್ರಾಮದ ಮಹಿಳೆಯರು ಯುವತಿಯರು ಪ್ರತಿ ಮನೆಯಿಂದ ಕರಿಯಪ್ಪ ತಾತನ ಗುಡಿ ಆಗಮಿಸಿ ದೀಪ ಹಚ್ಚಿ ತಾತನ ಆಶೀರ್ವಾದ ಪಡೆದುಕೊಂಡರು ನಂತರ ಕಮಿಟಿಯವರು ಆಯೋಜಿಸಿದ್ದ ಅಲ್ಪ ಉಪಹಾರವನ್ನು ಪ್ರಸಾದ ಎಂದು ಭಾವಿಸಿ ಸ್ವೀಕರಿಸಿದರು.

ಮಧ್ಯಾಹ್ನದ ಪ್ರಸಾದವನ್ನು ಗ್ರಾಮಸ್ಥರೆಲ್ಲರೂ ಹಾಗೂ ಜಾತ್ರೆಗೆ ಬಂದ ಎಲ್ಲ ಭಕ್ತರು ಸ್ವೀಕರಿಸಿದ ಕೃತಜ್ಞತಾ ಭಾವ ವ್ಯಕ್ತಪಡಿಸಿದರು ಭಕ್ತರು ಸಾಯಂಕಾಲ ಗ್ರಾಮದ ಪ್ರತಿ ಸಮಾಜದಿಂದ ರಥಕ್ಕೆ ಹೂವಿನ ಹಾರ ತರುವ ಸಂಭ್ರಮ ಯುವಕರ ಕುಣಿತ ಮೆರವಣಿಗೆಯೊಂದಿಗೆ ಮುದ್ದುಗಳ ಸಿಡಿತದೊಂದಿಗೆ ಎಲ್ಲಾ ಹೂವಿನ ಹಾರವನ್ನು ರಥಕ್ಕೆ ಹಾಕಿದ ನಂತರ ಸಾಯಂಕಾಲ ರಥ ಎಳೆಯುವುದರ ಮೂಲಕ ಗೊರಬಾಳ ಗ್ರಾಮದ ಕರಿಯಪ್ಪ ತಾತನ ಜಾತ್ರೋತ್ಸವವನ್ನು ಅದ್ದೂರಿಯಾಗಿ ಆಚರಣೆ. ಗ್ರಾಮಸ್ಥರು ಸಂಭ್ರಮ ಪಟ್ಟರು.

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!