Ad imageAd image

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ )ಸಂಘಟನೆಗಳ ಮಿಲನ ಕಾರ್ಯಕ್ರಮ.

Bharath Vaibhav
ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ )ಸಂಘಟನೆಗಳ ಮಿಲನ ಕಾರ್ಯಕ್ರಮ.
WhatsApp Group Join Now
Telegram Group Join Now

ರಾಯಚೂರು :- ಶ್ರೀ ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ರಾಯಚೂರು ನ ಸಭಾಂಗಣದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಬಣ ಹಾಗೂ ಭೀಮವಾದ ಬಣದ ಕಾರ್ಯಕರ್ತರು ಸೇರಿ ಎರಡು ಬಣಗಳನ್ನು ಮಿಲನಗೊಳಿಸಿ.ಎಸ್‌. ನರಸಿಂಹ ಜಿಲ್ಲಾ ಸಂಚಾಲಕ ಭೀಮವಾದ ಮಾತನಾಡಿ 1974- 75 ರಲ್ಲಿ ಪ್ರೊಫೆಸರ್ ಬಿ.ಕೆ ರವರು ಸಂಘಟನೆ ಸ್ಥಾಪನೆ ಮಾಡಿದ್ದಾರೆ ಈಗ ಅವು ಕರ್ನಾಟಕ ರಾಜ್ಯದಲ್ಲಿ 30 ರಿಂದ 40 ಭಾಗಗಳಾಗಿ ಕೆಲವು ಸಂಘಟಕರಿಂದ ಭಿಕ್ಷೆ ಬೇಡುವ ರೀತಿಯಲ್ಲಿ ನಮ್ಮ ಸಂಘಟನೆಗಳ ಸಾಗುತ್ತಿಲ್ಲವೆ ಇದು ನಿಲ್ಲಬೇಕು ಸಂಘಟನೆ ಗಳಿಂದ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕು ಈ ಎರಡು ಸಂಘಟನೆಗಳ ಮಿಲನದಿಂದ ಸಮುದಾಯದ ಕೆಲಸಗಳು ಆಗಬೇಕಾಗಿದೇ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಕಳೆದರು.

ನಮಗಿನ್ನೂ ಸರಿಯಾದ ಸ್ವಾತಂತ್ರ್ಯ ಸಿಕ್ಕಿಲ್ಲ ತುಳಿತಕ್ಕೊಳಪಟ್ಟಿದ್ದೇವೆ ನಾವು ಹೋರಾಟ ಮಾಡುವುದು ತಪ್ಪಿಲ್ಲ. ನಾವು ರೋಡಿಗೆ ಬರುವ ತಪ್ಪಿಲ್ಲ. ಅದಕ್ಕಾಗಿ ನಾವು ಇನ್ನು ಹೆಚ್ಚಿನ ಮಟ್ಟದಲ್ಲಿ ಸಂಘಟಿಕರಾಗಬೇಕಾಗಿದೆ ಎಂದು ಬಿ ಕೆ ಪ್ರೊ. ಕೃಷ್ಣಪ್ಪನವರ ಸಿದ್ಧಾಂತವನ್ನ ನಾವು ಒಪ್ಪಿಕೊಂಡು ನಮ್ಮ ರಾಯಚೂರು ಜಿಲ್ಲೆಯ ಕಾರ್ಯಕರ್ತರು ಎಲ್ಲರೂ ಒಮ್ಮತದಿಂದ ನಾವು ಬಿ .ಕೆ ಪ್ರೊಫೆಸರ್ ಕೃಷ್ಣಪ್ಪನವರ ಬಣದ ಜೊತೆಗೆ ಮಿಲನಗೊಂಡಿ ದೇವೆ ಆ ತಂದೆ ಬುನಾದಿ ಹಾಕಿಕೊಟ್ಟಿದ್ದಾರೆ ಆ ಒಂದು ದಾರಿಯಲ್ಲಿ ನಾವು ಸಾಗಬೇಕಾಗಿದೆ ಅದಕ್ಕಾಗಿ ಅವರ ಸಿದ್ಧಾಂತಗಳನ್ನು ಪಾಲಿಸಿ ಸಂಘಟನೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಎಲ್.ವಿ ಸುರೇಶ್ ಕಲ್ಬುರ್ಗಿಯ ವಿಭಾಗಿಯ ಸಂಚಾಲಕರು ಮಾತನಾಡಿ ಬಿ.ಕಷ್ಟಪ್ಪ ನವರ ಬಣ ಭೀಮವಾದ ಸಂಘಟಿಕರು ಪ್ರೊಫೆಸರ್ ಬಿ ಕೃಷ್ಣಪ್ಪನವರ ಬಣ ಜೊತೆಗೆ ಮಿಲನಗೊಂಡಿದ್ದು ಸ್ವಾಗತಕಾರ ಇನ್ನೂ ನಮಗೆ ಹೆಚ್ಚಿನ ಶಕ್ತಿ ಬಂದಂತಾಯಿತು ಅವರ ಮೂಲ ಸಂಘಟನೆಯತ್ತ ವಾಲಿದ್ದಾರೆ ಎಲ್ಲರೂ ಕೂಡಿ ನಾವು ಬಲವಾದ ಸಂಘಟನೆಯನ್ನು ಕಟ್ಟುತ್ತೇವೆ ನಾವು ವೈಯಕ್ತಿಕ ಹೋರಾಟವನ್ನು ಮಾಡುವುದು ನಿಲ್ಲಿಸಬೇಕಾಗಿದೆ ಸಮುದಾಯದ ಪರ ಶೋಷಿತಪರ ದಮನಿಯತರ ಪರ ಧ್ವನಿ ಆಗಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ. ಎಲ್ ವಿ ಸುರೇಶ್ ಕಲಬುರ್ಗಿ ವಿಭಾಗೀಯ ಸಂಚಾಲಕರು ಎಸ್ ನರಸಿಂಹ ರಾಯಚೂರು ಜಿಲ್ಲಾ ಸಂಚಾಲಕರು ಭೀಮ ವಾದ. ಬಸವರಾಜ ಕಂದಗಲ್ ಸಂಘಟನಾ ಸಂಚಾಲಕರು ಭಿಮವಾದ. ಷಣ್ಮುಖಪ್ಪ ಹಟ್ಟಿ ಜಿಲ್ಲಾ ಸಂಚಾಲಕರು ಬಿ.ಕೆ ಬಾಣ ರಾಯಚೂರು. ಹನುಮೇಶ ಆರೋಲಿ. ರಾಜ್ಯ ಕಲಾ ಮಂಡಳಿ ಸಂಚಾರಕರು. ಭೀಮವಾದ. ಚೆನ್ನಪ್ಪ ವಡ್ರಕಲ್. ಹುಸೇನಪ್ಪ ಬಾಗಲವಾಡ ಆಲಂಭಾಷ ಬೂದಿಹಾಳ. ಚಿಕ್ಕೋರಪ್ಪ ಸಿಂಧನೂರ ಮಲ್ಲಿಕಾರ್ಜುನ್ ಸಿಂಧನೂರು ಯಮನೂರು ಬಸಾಪುರ. ಕೆ ಇನ್ನು ಅನೇಕರು ಇದ್ದರು

ವರದಿ: -ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!