ಸಿಂಧನೂರು: ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ಸೇನೆ ಸಂಘಟನೆ ಬಲಿಷ್ಠ ಗೊಳಿಸಲು ತಾಲ್ಲೂಕು ಘಟಕ ವಿದ್ಯಾರ್ಥಿ ಘಟಕ ನಗರ ಘಟಕ ಗ್ರಾಮ ಘಟಕಗಳಿಗೆ ನೂತನ ಪದಾಧಿಕಾರಿಗಳ ಪದಗ್ರಹಣ ಮಾಡಲಾಯಿತು ಎಂದು ತಾಲೂಕ ಘಟಕದ ಅಧ್ಯಕ್ಷ ಅಂಬಿರಾಜ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾರ್ಚ್ ೯ರಂದು ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಭೆಯಲ್ಲಿ ಮಾತನಾಡಿದ ಅವರು ಕರ್ನಾಟಕ ರಕ್ಷಣಾ ಸೇನೆ ರಾಜ್ಯದಲ್ಲಿ ನೆಲ ಜಲ ಭಾಷೆ ಗಡಿ ಸಮಸ್ಯೆ ಉದ್ಭವಿಸಿದಾಗ ರಾಜ್ಯ ಘಟಕ ಅಧ್ಯಕ್ಷ ಟಿ. ರಮೇಶ್ ಗೌಡ ಹಾಗೂ ಉತ್ತರ ಕರ್ನಾಟಕದ ವಿಭಾಗೀಯ ಅಧ್ಯಕ್ಷ ಗುರುರಾಜ ಮುಕ್ಕುಂದ ಅವರ ಮಾರ್ಗದರ್ಶನದಲ್ಲಿ ಹೋರಾಟಗಳನ್ನು ಮಾಡಲಾಗುತ್ತದೆ ಜೊತೆಗೆ ಸ್ಥಳೀಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮ ಸಂಘಟನೆ ವತಿಯಿಂದ ಹೋರಾಟ ನಡೆಸಲಾಗುವುದು ಎಂದರು ಈ ಸಂದರ್ಭದಲ್ಲಿ, ಜ್ಞಾನೇಂದ್ರ ಸುಖಲಪೇಟೆ ತಾಲೂಕ ಘಟಕ ಸಂಚಾಲಕರನಾಗಿ.
ವೀರಭದ್ರಸ್ವಾಮಿ ತಾಲೂಕ ವಿದ್ಯಾರ್ಥಿ ಘಟಕ ಅಧ್ಯಕ್ಷರನ್ನಾಗಿ, ಮುರ್ತುಜ್ ಹೊಸಳ್ಳಿ ಈಜೆ. ಗ್ರಾಮ ಘಟಕ ಅಧ್ಯಕ್ಷರನ್ನಾಗಿ, ಮೋಹನ್ ಸತ್ಯವತಿ ಕ್ಯಾಂಪ್ ಗ್ರಾಮ ಘಟಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ತಾಲೂಕ ಘಟಕ ಅಧ್ಯಕ್ಷ ಅಂಬಿರಾಜ್, ತಾಲೂಕ ಕಾರ್ಮಿಕ ಘಟಕ ಅಧ್ಯಕ್ಷ ದುರುಗೇಶ್ ಬಾಲಿ, ತಾಲೂಕು ಉಪಾಧ್ಯಕ್ಷ ಮುನ್ನ, ರಮೇಶ್ ಕೆಎಂಎಸ್. ಅಕ್ಷಯ ಗೌಡ. ಹನುಮೇಶ್ ಕೋಣದ. ಶಿವಣ್ಣ ಎಸ್ ಆರ್ ಕೆ. ಆನಂದ್ ದೇಸಾಯಿ. ರುದ್ರಮುನಿ ಸ್ವಾಮಿ ಇನ್ನೂ ಅನೇಕರಿದ್ದರು,
ವರದಿ : ಬಸವರಾಜ ಬುಕ್ಕನಹಟ್ಟಿ




