ಸಿಂಧನೂರು: ಮೇ 12 ಕನ್ನಡ ನೆಲ ಜಲ ಭಾಷೆಗಾಗಿ ಪ್ರತಿಯೊಬ್ಬ ಕನ್ನಡಿಗರು ಕರವೇಯನ್ನು ಬಲಪಡಿಸಲು ಒಗ್ಗಟ್ಟಿನಿಂದ ಹೋರಾಡಬೇಕು ಹಾಗೂ ಕನ್ನಡವನ್ನು ಸಂರಕ್ಷಣೆ ಮಾಡಬೇಕು ಎಂದು ಕರವೇ ತಾಲೂಕ ಅಧ್ಯಕ್ಷ ಲಕ್ಷ್ಮಣ ಭೋವಿ ಹೇಳಿದರು
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ನೂತನ ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಂತರ ಅವರು ಮಾತನಾಡಿ ನಾಡ ಸೇನಾನಿ ಟಿಎ. ನಾರಾಯಣಗೌಡರ ಆದೇಶದಂತೆ ಕರವೇ ಸಿಂಧನೂರು ತಾಲೂಕಿನಲ್ಲಿ ಸಂಘಟನೆಯನ್ನು ಫಲಪಡಿಸಲು ಹಾಗೂ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್ ಅವರ ಮಾರ್ಗದರ್ಶನದ ಮೇರೆಗೆ
ರೇಣುಕಮ್ಮ ಮೂರು ಮೈಲ್ ಕ್ಯಾಂಪ್ ತಾಲೂಕ ಉಪಾಧ್ಯಕ್ಷನಾಗಿ. ಯಮನಮ್ಮ ರಾಮಕಿಶೋರ್ ಕಾಲೋನಿ ವಾರ್ಡ್ ಘಟಕ ಅಧ್ಯಕ್ಷರನ್ನಾಗಿ. ಸಂತೋಷಮ್ಮ. ರಾಜ್ಮಾ ಮೂರು ಮೈಲ್ ಕ್ಯಾಂಪ್. ನಾಗಮ್ಮ. ನಿರ್ಮಲ. ವಿಜಯಲಕ್ಷ್ಮಿ. ಇವರನ್ನು ಕರವೇಗೆ ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಅಮರಗುಂಡಪ್ಪ ಹೂಗಾರ್ ಇವರನ್ನು ಕರವೇಗೆ ಹಿರಿಯ ಸಲಹೆಗಾರನಾಗಿ ಆಯ್ಕೆ ಮಾಡಲಾಯಿತು.
ಕರವೇ ತಾಲೂಕ ಮಹಿಳಾ ಘಟಕ ಅಧ್ಯಕ್ಷೆ ಶಿವಮ್ಮ ಕಬ್ಬೇರ್ ಮಾತನಾಡಿ ಲಕ್ಷ್ಮಣ್ ಭೋವಿ ಅವರ ನೇತೃತ್ವದಲ್ಲಿ ಸುಮಾರು 20ಕ್ಕೆ ಹೆಚ್ಚು ಮಹಿಳಾ ಕಾರ್ಯಕರ್ತರು ಸೇರ್ಪಡೆಗೊಂಡ ಕಾರ್ಯಕರ್ತರನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು ನಗರ ಘಟಕ ಅಧ್ಯಕ್ಷ ರಫಿ. ತಾಲೂಕು ಘಟಕದ ಉಪಾಧ್ಯಕ್ಷ ಬಸವರಾಜ ಮಹಿಳಾ ಪದಾಧಿಕಾರಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ವೇಳೆ ಕರವೇ ತಾಲೂಕ ಅಧ್ಯಕ್ಷ ಲಕ್ಷ್ಮಣ ಭೋವಿ. ಸಂಸ್ಕೃತಿಕ ಘಟಕ ಅಧ್ಯಕ್ಷ ಬಸವರಾಜ ಗಸ್ತಿ. ತಾಲೂಕ ಮಹಿಳಾ ಘಟಕ ಅಧ್ಯಕ್ಷೆ ಶಿವಮ್ಮ ಕಬ್ಬೇರ್. ತಾಲೂಕ ಘಟಕ ಉಪಾಧ್ಯಕ್ಷ ಬಸವರಾಜ. ನಗರ ಘಟಕ ಅಧ್ಯಕ್ಷ ರಫಿ ಇದ್ದರು.




