ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತರಾದ ಎಂ ಶ್ರೀನಿವಾಸ್ ಆರೋಗ್ಯ ವಿಚಾರಣೆ ಮತ್ತು ಸರ್ಕಾರಿ ಬಸ್ ಡಿಪೋ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದ ಮಾಜಿ ಸಚಿವ ಶ್ರೀರಾಮುಲು.
ಮೊಳಕಾಲ್ಮೂರು:ರಾಯಪುರ ಗ್ರಾಮದಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗಕ್ಕೆ ಮುಂದಿನ ದಿನಗಳಲ್ಲಿ ಮೂಲಸೌಕರ್ಗಳಿಗೆ ಅನುಕೂಲ ಹಾಗೂ ಹಾಗೆ ನೋಡಿಕೊಳ್ಳುತ್ತೇನೆ, ಅದೇ ರೀತಿ ಈ ಹಲಮಾರಿ ಜನಾಂಗದಲ್ಲಿ ಹುಟ್ಟಿ ತ್ತಮ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀನಿವಾಸ್‍ರವರ ಆರೋಗ್ಯದ ವಿಚಾರದಲ್ಲಿ ನನ್ನ ಕಡೆಯಿಂದ ಎಷ್ಟು ಸಾಧ್ಯವೊ ಅಷ್ಟು ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು, ತಾಲೂಕಿನ ರಾಯಪುರ ಗ್ರಾಮಕ್ಕೆ ಮಾಜಿ ಸಚಿವ ಅಲೆಮಾರಿ ಜನಾಂಗದ ಕುಂದು ಕೊರತೆಗಳನ್ನು ವಿಚಾರಣೆ ಮಾಡಿ ಮಾತನಾಡಿದರು.ನಾನು ಸರ್ಕಾರದ ಹಂತದಲ್ಲಿ ಮಾತನಾಡಿ ಮಾಶಾಸನ ಕೊಡಿಸುವ ಕೆಲಸ ಮಾಡುತ್ತೇನೆ ಇವರಿಗೆ ಆರೋಗ್ಯ ಐಶ್ವರ್ಯ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು,
ಅದೇ ರೀತಿ ರಾಯಪುರ ಗ್ರಾಮದ ಬಳಿ ತಮ್ಮ ಅವಧಿಯಲ್ಲಿ ಸರ್ಕಾರಿ ಬಸ್ ಡಿಪೋ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ ಅವರು ಮಾತನಾಡಿದರು, ಸಿದ್ದರಾಮಯ್ಯನವರು ದೊಡ್ಡ ಬಜೆಟ್ ಮಂಡನೆ ಮಾಡಿದ್ದಾರೆ, ಆದರೆ ಸಾಲದಲ್ಲಿ ಎರಡನೇ ರಾಜ್ಯವಾಗಿದೆ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಿ ಖಜಾನೆ ಖಾಲಿಯಾಗಿದೆ,
ನಾನು ಹಿಂದೆ ಸಾರಿಗೆ ಸಚಿವ ಆಗಿದ್ದಾಗ ಕಂಡಕ್ಟರ್ ಮತ್ತು ಡ್ರೈವರ್ ಗಳಿಗೆ ಶೇಕಡ 80ರಷ್ಟು ಬೇಡಿಕೆಗಳನ್ನು ಈಡೇರಿಸಿದ್ದೇವೆ ಆದರೆ ಕಾಂಗ್ರೆಸ್ ಸರ್ಕಾರವು ನಿಗಮವನ್ನು ತಮ್ಮ ಸ್ವಂತ ಮನೆಯನ್ನಾಗಿ ಮಾರ್ಪಾಡು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಆದ್ದರಿಂದ ಸಾರಿಗೆ ಇಲಾಖೆಯು ಕೆಟ್ಟ ಪರಿಸ್ಥಿತಿಯಲ್ಲಿ ನಡೆಯುತ್ತಿದೆ ಈ ಹಿಂದೆ ನಾನು ಸಚಿವನಾಗಿದ್ದಾಗ ಈ ಭಾಗದಲ್ಲಿ ಶಾಲೆಗೆ ಹೋಗುವಂತ ಮಕ್ಕಳಿಗೆ ಬಸ್ಸು ಸೌಕರ್ಯ ಇಲ್ಲದ ಕಾರಣ ಇಲ್ಲಿನ ಎಲ್ಲಾ ಮುಖಂಡರು ನನಗೆ ಒತ್ತಾಯ ಮಾಡಿದ್ದರಿಂದ ನನ್ನ ಅವಧಿಯಲ್ಲಿ ಸಾರಿಗೆ ಬಸ್ ನಿಲ್ದಾಣ ಅದೇ ರೀತಿ ಸಾರಿಗೆ ಬಸ್ ಡಿಪೋವನ್ನು ಈ ತಾಲೂಕಿಗೆ ನೀಡಲಾಯಿತು ಎಂದರು.
ನಾನು ಆರೋಗ್ಯಮಂತ್ರಿಯಾಗಿದ್ದಾಗ ಈ ಭಾಗಕ್ಕೆ ಅನೇಕ ಪ್ರಾಥಮಿಕ ಆರೋಗ್ಯ ಆಸ್ಪತ್ರೆಗಳನ್ನು ಮಾಡಿದ್ದೇನೆ ನನ್ನ ಅವಧಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿದ್ದೇನೆ, ನಾನು ಸಚಿವನಾಗಿ ಈ ಭಾಗಕ್ಕೆ ಉತ್ತಮ ಕೆಲಸ ಮಾಡಿದ್ದೇನೆ ಆದರೆ ಸಿದ್ದರಾಮಯ್ಯನವರು ನೀಡಿರುವ ಬಜೆಟ್ ನಲ್ಲಿ ಅನೇಕ ಇಲಾಖೆಗಳನ್ನು ಮರೆತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶ್ರೀರಾಮುಲು ಆಪ್ತ ಸಹಾಯಕರು ಮತ್ತು ಮುಖಂಡರಾದ ಪಾಪೇಷ ನಾಯಕ್, ಮಂಡಲ ಅಧ್ಯಕ್ಷರಾದ ಶ್ರೀರಾಮರೆಡ್ಡಿ ನಿಕಟಪೂರ್ವ ಅಧ್ಯಕ್ಷರಾದ ಡಾ.ಪಿ.ಎಂ ಮಂಜುನಾಥ್ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್, ಮಾಜಿ ಉಪಾಧ್ಯಕ್ಷರಾದ ಎಂ ಎನ್ ಮಂಜಣ್ಣ ಕಿರಣ್ ಗಾಯಕ್ವಾಡ್ ಜಿರಳೆ ತಿಪ್ಪೇಸ್ವಾಮಿ ,ಪ್ರಭು ಸಿದ್ದಾರ್ಥ್, ಹೇಮಂತ್ ಕುಮಾರ್ ರಾಯಪುರ ಗ್ರಾಮದ ಸದಸ್ಯರುಗಳು ಮುಖಂಡರು ಇನ್ನು ಹಲವರು ಉಪಸ್ಥಿತರಿದ್ದರು.
ವರದಿ :ಪಿಎಂ ಗಂಗಾಧರ




