ಬೆಂಗಳೂರು : ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಅಂದರೆ ಪೀಣ್ಯ 2ನೇ ಹಂತದಲ್ಲಿರುವ ಕೈಮಗ್ಗ ಅಭಿವೃದ್ಧಿ ನಿಗಮ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದೇವೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೌಕರರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ನೌಕರ ಎ. ನಾಗರಾಜಯ್ಯ ಹೇಳಿದರು.
ನಿವೃತ್ತಿ ಆದನಂತರ ಇಲ್ಲಿವರೆಗೆ ಗ್ರಾಜ್ಯುಟಿ ಮತ್ತು ಗಳಿಕೆ ಹಣ ಹಾಗೂ ನಿಗಮದಿಂದ ಬರುವ ಸವಲತ್ತುಗಳು ಕೊಟ್ಟಿಲ್ಲಾ ಎಂದು ಬೆಸರ ವ್ಯಕ್ತಪಡಿಸಿದರು.

ಸುಮಾರು ಬಾರಿ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ , ನಿಗಮದ ಅಧ್ಯಕ್ಷರಿಗೆ, ಸಚಿವರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ನಮ್ಮ ಬೇಡಿಕೆಗಳು ಈಡೇರಿಲ್ಲಾ ನಮಗೆ ವಯಸ್ಸು ಆಗಿದೆ ಒಂದಿಲ್ಲಾ ಒಂದು ಕಾಯಿಲೆಗಳು ಬರುತ್ತವೆ ಬಿಪಿ, ಶುಗರ್ , ಕ್ಯಾನ್ಸರ್,ಕಿಡ್ನಿ ದೇಹಕ್ಕೆ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಪ್ರತಿ ತಿಂಗಳ ಔಷಧಿಗೆ ಹಣ ಇಲ್ಲದಂತಾಗಿದೆ ಈ ಪರಿಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ನಿತ್ಯ ಬಳಸುವ ವಸ್ತುಗಳು ಗಗನಕ್ಕೇರುತ್ತಿವೆ ಕೊಡುವ ಸವಲತ್ತನ್ನು ನೀಡದಿರುವದಕ್ಕೆ ಕಷ್ಣದ ಜೀವನ ಮಾಡುತ್ತಿದ್ದೇವೆ. ನಾವು ನಿವೃತ್ತ ನೌಕರರು ನಾವುಗಳು 50ರಿಂದ60 ಜನರು ಇದ್ದೇವೆ ಇಲ್ಲಿವರೆಗೂ ಗ್ರಾಜ್ಯುಟಿ, ಗಳಿಕೆ ರಜೆಯ ಹಣ ಮತ್ತು ಬರಬೇಕಾದ ಸವಲತ್ತುಗಳನ್ನು ಕೊಟ್ಟಿಲ್ಲ ದಯವಿಟ್ಟು ಸಂಬಂಧ ಪಟ್ಟ ಸಚಿವರು, ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ನಿವೃತ್ತ ನೌಕರರ ಮೇಲೆ ಕರುಣೆ ತೋರಿ ಶೀಘ್ರದಲ್ಲಿ ಗ್ರಾಜ್ಯುಟಿ, ಗಳಿಕೆ ರಜೆಯ ಹಣ ಬಿಡುಗಡೆ ಮಾಡಬೇಕೆಂದು ಮಾದ್ಯಮದವರ ಮೂಲಕ ಮನವಿ ಮಾಡಿ ಕೋಳ್ಳುತ್ತೇನೆ ಎಂದು ಕ.ಕೈ.ನಿ.ಸಂಘದ ಅಧ್ಯಕ್ಷ ಎ.ನಾಗರಾಜಯ್ಯ ಬಿ ವಿ ನ್ಯೂಸ್-5 ಗೆ ತಿಳಿಸಿದರು.
ಇದೆ ವೇಳೆ ನಮ್ಮ ಶಾಸಕ ಎಸ್ ಮುನಿರಾಜು ರವರಿಗೆ ಮನವಿ ಕೊಡಲಾಗುವುದು ಎಂದರು.ನಿವೃತ್ತ ನೌಕರರಾದ ಕೆ.ವೆಂಕೋಬರಾವ್, ಆನಂದ್ ಕುಮಾರ್, ಸ್ವಾಮಿ ದೇವರು, ವರದರಾಜು, ಕೃಷ್ಣಪ್ಪ, ಡಿ. ಮಂಜುನಾಥ್, ಹನುಮಂತರಾವ್,ನಿಂಗಪ್ಪ, ಕೃಷ್ಣಮೂರ್ತಿ, ಅನಂತ ಮೂರ್ತಿ,ಕೆಂಪಯ್ಯ,ರಾವ್, ನಂಜುಂಡರಾವ್, ಎನ್ ಅಮರೇಶ್, ವನಿತಮ್ಮ ಸೇರಿದಂತೆ ನಾವೇಲ್ಲರು ಪುನಃ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತೇವೆ ಎಂದರು.
ವರದಿ: ಅಯ್ಯಣ್ಣ ಮಾಸ್ಟರ್




