Ad imageAd image

ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ

Bharath Vaibhav
ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ
WhatsApp Group Join Now
Telegram Group Join Now

ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡ ಪತ್ರಕರ್ತರ ಸಮಸ್ಯೆ ಕುರಿತಂತೆ ಕಾರ್ಯ ಚಟುವಟಿಕೆ ನಡೆಸುತ್ತಿರುವ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಪತ್ರಕರ್ತರ ಸಮಸ್ಯೆ ಕುರಿತಂತೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಸಮ್ಮುಖದಲ್ಲಿ ವಿಧಾನ ಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಸಂಘದ ರಾಜ್ಯಾಧ್ಯಕ್ಷ ಜಿ ಎಂ ರಾಜಶೇಖರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿ, ನಗರ, ಗ್ರಾಮೀಣ ಪತ್ರಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೂಗು ಹಿಂದಿನಿಂದಲೂ ಕೇಳಿ ಬರುತ್ತಿದೆ. ಪತ್ರಕರ್ತರ ಸಮೂಹ ಮಾಧ್ಯಮಗಳ ಹೊರಗನ್ನು,ಅದರ ಮಹತ್ವವನ್ನು ಅರಿತವರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸಂಘವು ಒತ್ತಾಯ ಮಾಡಿದೆ.

ರಾಜ್ಯ ಸರಕಾರದಿಂದ ನೀಡುತ್ತಿರುವ ಶಕ್ತಿ ಯೋಜನೆಯಲ್ಲಿ ನಗರ, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಸರಕಾರ ನೀಡಿದರು, ಸಂಬಂಧ ಪಟ್ಟ ಇಲಾಖೆಯ ಮಾನ ದಂಡದಿಂದ ನೈಜ ಪತ್ರಕರ್ತರು ಸೌಲಭ್ಯ ವಂಚಿತರಾಗಿದ್ದಾರೆ. ಆರ್ ಎನ್ ಐ ಹೊಂದಿರುವ ಪತ್ರಿಕೆಗಳು ಹಾಗೂ ನೈಜ ಪತ್ರಕರ್ತರಿಗೆ ಆಯಾಯ ಜಿಲ್ಲೆಗಳ ವಾರ್ತಾ ಅಧಿಕಾರಿಗಳಿಂದ ಮಾಹಿತಿ ಪಡೆದು ಸೌಲಭ್ಯ ಒದಗಿಸಲು ಒತ್ತಾಯ ಮಾಡಿದರು.

ಮಾಧ್ಯಮ ಪಟ್ಟಿಗೆ ಸೇರ್ಪಡೆ ಕುರಿತಂತೆ ಕೆಲವು ನಿಲುವುಗಳನ್ನು ಸಡಿಲಗೊಳಿಸಿ ಕಾಲಕ್ಕೆ ಸರಿಯಾಗಿ ಸಭೆ ನಡೆಸಿ ಮಾಧ್ಯಮ ಪಟ್ಟಿಗೆ ಸೇರಿಸಲು ಒತ್ತಾಯಿಸುವುದರೊಂದಿಗೆ ಪತ್ರಕರ್ತರಿಗೆ ನಿವೃತ್ತಿ ವೇತನ ಕುರಿತಂತೆ ಬಹಳಷ್ಟು ಅರ್ಜಿಗಳು ಬಾಕಿ ಇದ್ದು, ಇದನ್ನು ಇತ್ಯರ್ಥ ಪಡಿಸುವಂತೆ ಸಂಘವು ಒತ್ತಾಯ ಮಾಡಿತು. ಪತ್ರಿಕೋದ್ಯಮ ಕುರಿತಂತೆ ಬಜೆಟ್ ನಲ್ಲಿ ಹೆಚ್ಚು ಅನುದಾನ ನೀಡುವಂತೆ ರಾಜ್ಯದ ಪತ್ರಕರ್ತರಿಗೆ ವಿವಿಧ ಸೌಲಭ್ಯ ಒದಗಿಸುವಂತೆ ಬೇಡಿಕೆ ಇಡಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ , ಪತ್ರಕರ್ತರಿಗೆ ಪೂರಕವಾಗಿರುವ ಇಲಾಖೆಗಳಲ್ಲಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಇನ್ನಿತರ ಸರಕಾರಿ ಕಾರ್ಯಕ್ರಮಗಳಿಗೆ ಸುದ್ದಿಗೆ ತೆರಳಲು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಹನ ಕೊರತೆ ಇದ್ದು, ಈ ಸೌಲಭ್ಯ ನೀಡುವಂತೆ ಒತ್ತಾಯಿಸಿ ಹಾಗೂ ಸಂಬಂಧ ಪಟ್ಟ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಹಳಷ್ಟು ಇದ್ದು ಸಿಬ್ಬಂದಿಗಳ ನೇಮಕ ಮಾಡುವಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಒತ್ತಾಯ ಮಾಡಿದೆ. ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಟಿ ಪಿ ಕೃಷ್ಣನ್, ರಾಜ್ಯ ಕಾರ್ಯದರ್ಶಿ ವಸಂತ್ ಕುಮಾರ್, ಕೋಶಾಧಿಕಾರಿ ಮಂಜುನಾಥ್, ಸಮಿತಿ ಸದಸ್ಯ ಚಂದ್ರಶೇಖರ ಹಾಲಪ್ಪ ಭಾಗವಹಿಸಿದ್ದರು.
ವರದಿ : ರಾಜು ಅರಸಿಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!