Ad imageAd image

ದ್ವೀಪತ್ನಿ ಹೊಂದಿರುವ ಶಿಕ್ಷಕನನ್ನು ಅಮಾನತುಗೊಳಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಮನವಿ.

Bharath Vaibhav
ದ್ವೀಪತ್ನಿ ಹೊಂದಿರುವ ಶಿಕ್ಷಕನನ್ನು ಅಮಾನತುಗೊಳಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಮನವಿ.
WhatsApp Group Join Now
Telegram Group Join Now

ಸೇಡಂ:– ತಾಲೂಕಿನ ರಾಘಪುರ ತಾಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವಿರಾಜ ಅವಂಟಿ ಅವರು ಈಗಾಗಲೇ ಒಬ್ಬ ಪತ್ನಿ ಇದ್ದರೂ ಕೂಡ ಎರಡನೇ ಪತ್ನಿಯನ್ನು ಹೊಂದಿರುತ್ತಾರೆ.

ಮೊದಲನೇ ಪತ್ನಿ ರೇಣುಕಾ ಅವರು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) ಸೇಡಂನಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎರಡನೇ ಪತ್ನಿ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್.2ರ ವಿದ್ಯಾನಗರ ಸೇಡಂ ನಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎರಡನೇ ಪತ್ನಿ ಅರ್ಚನಾ ಅವರು ಮೊದಲು ಜಗದೀಶ್ ಎಂಬುವವರನ್ನು ವಿವಾಹಿತರಾಗಿ ವಿಚ್ಛೇದನ ಪಡೆಯದೆ ಜೀವಂತ ಪತಿ ಇದ್ದರೂ ಕೂಡ ರವಿರಾಜ ಅವಂಟಿ ಇವರನ್ನು ಕಾನೂನು ಬಹಿರವಾಗಿ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಮದುವೆಯಾಗುತ್ತಾರೆ. ಅಷ್ಟೇ ಅಲ್ಲದೆ ರವಿರಾಜ ಅವಂಟಿ ಅವರು ಸಹ ಮೊದಲನೇ ಪತ್ನಿ ಇದ್ದರೂ ವಿಚ್ಛೇದನ ಪಡೆಯದೆ ಅರ್ಚನಾ ಇವರನ್ನು ಕಾನೂನು ಬಹಿರವಾಗಿ ಮದುವೆಯಾಗಿರುತ್ತಾನೆ.

ಎರಡನೇ ಪತ್ನಿ ಅರ್ಚನಾ ಗಂಡ ರವಿರಾಜ ದಂಪತಿಗಳಿಗೆ ಅನ್ವಿತ್ ಎಂಬ ಗಂಡು ಮಗು ಇರುತ್ತದೆ.ಇದರಿಂದಾಗಿ ರವಿರಾಜ ಅವಂಟಿ ಅವರು ಕರ್ನಾಟಕ ರಾಜ್ಯ ನೌಕರರ ಸೇವಾ (ನಡತೆ) ನಿಯಮಗಳು 2021ರ ನಿಯಮ ಮತ್ತು ಉಪ ನಿಯಮಗಳನ್ನು ಉಲ್ಲಂಘಿಸಿರುತ್ತಾರೆ.

ಆದ್ದರಿಂದ ಕಾನೂನು ಪ್ರಕಾರ ಸದರಿ ಶಿಕ್ಷಕರಾದ ರವಿರಾಜ ಅವಂಟಿ ಮತ್ತು ಅರ್ಚನಾ ಸಹ ಶಿಕ್ಷಕಿ ಇವರ ಮೇಲೆ ಶಿಸ್ತು ಕ್ರಮ ಜರುಗಿಸಿ ಸೇವೆಯಿಂದ ಅಮಾನತು ಮಾಡಬೇಕೆಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕ ಅಧ್ಯಕ್ಷರಾದ ಭೀಮಾಶಂಕರ ಕೊರವಿ ನೇತೃತ್ವದಲ್ಲಿ ಮಾನ್ಯ ತಾಲೂಕ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ಣಾಟ ನವ ನಿರ್ಮಾಣ ಸೇನೆ ಪದಾಧಿಕಾರಿಗಳು ಭಾಗಿಯಾಗಿದ್ದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!