ಸಿಂಧನೂರು : ಬುಧವಾರ ರಂದು ನಗರದ ಸರ್ಕಿಟ್ ಹೌಸಿನಲ್ಲಿ ನೂತನ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ಗುರುರಾಜ ಎಸ್. ಮುಕ್ಕುಂದ ಅವರು ಅಧ್ಯಕ್ಷತೆಯಲ್ಲಿ ಸಭೆ ಸೇರಿ ಮಾತನಾಡಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆ ಎಂಬ ಸಂಘಟನೆಯು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಯ ನಿರ್ದಿಷ್ಟ ಶಾಖೆ ಅಲ್ಲ ಬದಲಿಗೆ ಅದಕ್ಕೆ ಸಂಬಂಧಿಸಿದ ಸಂಘಟನೆಯಾಗಿದೆ ಇದು ಕನ್ನಡಪರ ಕನ್ನಡ ಭಾಷೆ ಮತ್ತು ಕರ್ನಾಟಕ ರಾಜ್ಯದ ಹಿತಸಕ್ತಿಗಳನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ.
ರಾಜರತ್ನ ಡಾ. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಉತ್ತಮ ಸಮಾಜ ಸೇವೆ ಮಾಡುವ ದೃಷ್ಟಿಯಿಂದ ರಾಜ್ಯಮಟ್ಟದಲ್ಲಿ ಡಿಜಿ. ಬಾಬುರವರ ನೇತೃತ್ವದಲ್ಲಿ ಸಂಘಟನೆ ಆರಂಭಿಸಲಾಗಿದೆ ಅವರ ಆದೇಶದ ಮೇರೆಗೆ ಜಿಲ್ಲಾ ಮಟ್ಟ ತಾಲೂಕ ಮಟ್ಟದಲ್ಲಿ ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು
” ರಾಯಚೂರು ಜಿಲ್ಲಾಧ್ಯಕ್ಷರಾಗಿ ಡಾ. ಸೋಮನಾಥ ಸುಲಂಗಿ. ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷರಾಗಿ ದುರುಗೇಶ್ ಬಾಲಿ. ಜಿಲ್ಲಾ ಉಪಾಧ್ಯಕ್ಷರಾಗಿ ಅಜ್ಮೀರ್ ಸಾಬ್. ಸಿಂಧನೂರು ತಾಲೂಕು ಘಟಕ ಅಧ್ಯಕ್ಷರಾಗಿ ಮಂಜುನಾಥ್ ಬಾದರ್ಲಿ. ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಕೆ. ಕಾರ್ಮಿಕ ಘಟಕ ಅಧ್ಯಕ್ಷರಾಗಿ ವಿಜಯಕುಮಾರ ಸುಕಲಪೇಟೆ. ಸಂಸ್ಕೃತಿಕ ಘಟಕ ಅಧ್ಯಕ್ಷರಾಗಿ ಮಹೇಶ್ ಸ್ವಾಮಿ. ವಿದ್ಯಾರ್ಥಿ ಘಟಕ ಅಧ್ಯಕ್ಷರಾಗಿ ಕನಕರಾಯ ಹೊಸಳ್ಳಿ ಕ್ಯಾಂಪ್. ಆಯ್ಕೆಯಾದರು ಈ ಸಂದರ್ಭದಲ್ಲಿ, ಪಾಮೇಶ್ ಹೊಸಳ್ಳಿ ಇಜೆ. ನಾಗಪ್ಪ ಸಾಲ್ಗುಂದ. ಯಮನೂರ ಬಸಾಪುರ ಕೆ. ಸೋಮಣ್ಣ ಸುಕಲ್ಪೇಟೆ. ಮನು ಮೈಲಾರಿ. ರಾಜು. ಬಸವರಾಜ. ವೀರೇಶ್ ಯಾದವ. ವಿರುಪಾಕ್ಷಿ ಗೌಡ. ಲಾರಾ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಬಸವರಾಜ ಬುಕ್ಕನಹಟ್ಟಿ




