ಸಿರುಗುಪ್ಪ: ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆಯ ಸಹಯೋಗದಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ತಹಶೀಲ್ದಾರ್ ಗೌಸಿಯಾ ಬೇಗಂ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿ 1956ರ ನವೆಂಬರ್ 1 ರಂದು ದಕ್ಷಿಣ ಭಾರತದ ಕನ್ನಡ ಭಾಷೆಯನ್ನು ಮಾತನಾಡುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವಾಗಿ ನಿರ್ಮಾಣವಾಯಿತು.
ಅದೇ 01 ನವೆಂಬರ್ 1973 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಮೈಸೂರು ರಾಜ್ಯ ಬದಲಾಗಿ ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು.
ಈ ಕನ್ನಡ ನಾಡು ನುಡಿಯ ಏಕತೆಗಾಗಿ ಶ್ರಮಿಸಿ ತಮ್ಮ ತ್ಯಾಗ ಬಲಿದಾನಗೈದ ಎಲ್ಲಾ ಮಹನೀಯರಿಗೆ ನನ್ನ ಕನ್ನಡ ನಮನಗಳನ್ನು ಸಲ್ಲಿಸಲಾಗುವುದು.
ಅದರಂತೆ ನಾವೆಲ್ಲರೂ ಸಾವಿರಾರು ಇತಿಹಾಸವಿರುವ ಕನ್ನಡ ಭಾಷೆ, ಸಂಸ್ಕೃತಿಗೆ ಧಕ್ಕೆ ಬರದ ಹಾಗೆ ನಡೆದುಕೊಳ್ಳಬೇಕೆಂದರು.
ಪೌರಾಯುಕ್ತ ಗಂಗಾಧರ ಅವರು ಮಾತನಾಡಿ ಎಲ್ಲಾ ಭಾಷೆಗಳ ಮೇಲೆ ಗೌರವವಿರಲಿ ಆದರೆ ಕನ್ನಡಾಭಿಮಾನ ಎಲ್ಲರ ಎದೆಯಲ್ಲಿರಲಿ ಎಂದು ಆಶಿಸುತ್ತೇನೆಂದರು.
ಕರ್ನಾಟಕ ರಾಜ್ಯ ಏಕೀಕರಣ ವೇಳೆ ಗೋಕಾಕ್ ಚಳುವಳಿಯ ಮೂಲಕ ಹಲವಾರು ಮಹನೀರಯರು ಹೋರಾಟದ ಮೂಲಕ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಮುಂದಾಗಿದ್ದು ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟಿನ ತಾಲೂಕಾಧ್ಯಕ್ಷ ಬಿ.ಎಮ್.ಸತೀಶ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡ್ರೈವರ್ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ತೆಕ್ಕಲಕೋಟೆ ಪಟ್ಟಣದ ಕಸ್ತೂರಿ ಬಾ ವಸತಿ ಶಾಲೆಯ ವಿದ್ಯಾರ್ಥಿಗಳು ನೃತ್ಯಗೈದು ಎಲ್ಲರನ್ನು ಮನರಂಜಿಸಿದರು.
ಇದೇ ವೇಳೆ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ, ಉಪಾಧ್ಯಕ್ಷೆ ಯಶೋದಾಮೂರ್ತಿ, ಸದಸ್ಯ ಬಿ.ಎಮ್.ಅಪ್ಪಾಜಿ, ಪೋಲೀಸ್ ಉಪಾಧೀಕ್ಷಕ ಮಾಲತೇಶ್ ಕೂನಬೇವ, ತಾಲೂಕು ಪಂಚಾಯಿತಿ ಇ.ಓ ಪವನ್ ಕುಮಾರ್.ಎಸ್.ದಂಡಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರ‍್ರಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರದೀಪ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




