ತಿರುವನಂತಪುರಂ: ಕರ್ನಾಟಕ ಕ್ರಿಕೆಟ್ ತಂಡವು ಆತಿಥೇಯ ಕೇರಳ ವಿರುದ್ಧ ಇಲ್ಲಿ ನಡೆದ ಎಲೈಟ್ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಕೇರಳ ವಿರುದ್ಧ ಮಹತ್ವದ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಲು ಯಶಸ್ವಿಯಾಗಿದೆ.
ಇಲ್ಲಿನ ಮಂಗಲಪುರಂ ಕೆಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೂರನೇ ದಿನದಾಟ ಮುಗಿದಾಗ ಕೇರಳ ಫಾಲೋ ಆನ್ ಪಡೆದು ವಿಕೆಟ್ ನಷ್ಟವಿಲ್ಲದೇ 10 ರನ್ ಗಳಿಸಿತ್ತು. ಕರ್ನಾಟಕ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗೆ 586 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಕೇರಳ 238 ರನ್ ಗಳಿಗೆ ಆಲೌಟಾಗಿತ್ತು.
ಕರ್ನಾಟಕ 348 ರನ್ ಗಳ ಮುನ್ನಡೆ ಗಳಿಸಿತ್ತು. ಕೇರಳ ಫಾಲೋ ಆನ್ ಪಡೆದು ದ್ವಿತೀಯ ಸರದಿ ಆರಂಭಿಸಿದ್ದು, ವಿಕೆಟ್ ನಷ್ಟವಿಲ್ಲದೇ 10 ರನ್ ಗಳಿಸಿದ್ದು, ಕರ್ನಾಟಕದ ಇನ್ನಿಂಗ್ಸ್ ಮುನ್ನಡೆಯನ್ನು ಅಳಿಸಿ ಹಾಕಲು ಇನ್ನು 338 ರನ್ ಗಳಿಸಬೇಕಿದೆ ಕೇರಳ ತಂಡ.
ಕರ್ನಾಟಕ ಈ ಪಂದ್ಯಕ್ಕೆ ಮುನ್ನ ಎರಡು ಪಂದ್ಯಗಳಿಂದ 4 ಅಂಕಗಳನ್ನು ಮಾತ್ರ ಗಳಿಸಿದ್ದು, ಈ ಪಂದ್ಯದಲ್ಲಿ ಈಗಾಗಲೇ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಮೂರು ಅಂಕಗಳನ್ನು ಖಚಿತಪಡಿಸಿಕೊಂಡಿದ್ದು, ಪಂದ್ಯದ ಕಡೆಯ ದಿನವಾದ ಇಂದು ಇನ್ನಿಂಗ್ಸ್ ಜಯ ಗಳಿಸಿದರೆ 7 ಅಂಕಗಳನ್ನು ಪಡೆದು ಅಂಕ ಪಟ್ಟಿಯಲ್ಲಿ ತನ್ನನ ಸ್ಥಿತಿಯನ್ನು ಸುಧಾರಿಸಿಕೊಳ್ಳಲಿದೆ ರಾಜ್ಯ ತಂಡ.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 586 ಡಿಕ್ಲೇರ್
ಕೇರಳ 238 ( ವಿದ್ವತ್ ಕಾವೇರಪ್ಪ 42 ಕ್ಕೆ 4, ವಿಜಯಕುಮಾರ್ ವೈಶ್ಚಾಕ್ 62 ಕ್ಕೆ 3) ಹಾಗೂ ವಿಕೆಟ್ ನಷ್ಟವಿಲ್ಲದೇ 10




