ವಿಜಯಪುರ : ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ಹಮ್ಮಿಕೊಳ್ಳಲಾದ ಯುವ ಕವಿಗೋಷ್ಠಿಗೆ ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಸಲಾದಹಳ್ಳಿ ಯ ಯುವಕವಿ, ಲೇಖನರಾಧ ಸಾಯಬಣ್ಣ ಮಲ್ಲಪ್ಪ ಮಾದರ ಆಯ್ಕೆಯಾಗಿದ್ದಾರೆ.
ದಿನಾಂಕ ೨೧-೦೭-೨೦೨೫ ರಂದು ಸೋಮವಾರ ಬೆಳಗ್ಗೆ ೧೦. ೩೦ ಗಂಟೆಗೆ ಕನ್ನಡ ಭವನ ಬೆಳಗಾವಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಎಲ್ಎನ್ ಮುಕುಂದರಾಜ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರು ವಹಿಸಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಸವರಾಜ ಜಗಜಂಪಿ ನಿರ್ದೇಶಕರು ಬೆಳಗಾವಿ ಇವರು ವಹಿಸಲಿರುವರು, ಆಸೆಯ ನುಡಿಯನ್ನು ಡಾ. ಮೈತ್ರೇಯಿನಿ ಗದ್ದಿಗೆಪ್ಪಗೌಡರ ಸಂಚಾಲಕರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರು ಮಾತನಾಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟರ್ ಶ್ರೀ ಕರಿಯಪ್ಪ ಎನ್, ಡಾ ಅರ್ಜುನ್ ಗೋಳಸಂಗಿ ಸದಸ್ಯರು ಇವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಮಹಾದೇವ್ ಬಸರ್ ಕೋಡ್ ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರು ನಿರ್ವಹಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ




