ಕಲಘಟಗಿ.: ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರುಣನ ಆರ್ಭಟಕ್ಕೇ ಕಲಘಟಗಿ ತಾಲೂಕಿನಲ್ಲಿ ಅಪಾರ ಹಾನಿಯುಂಟಾಗಿದೆ. ಗ್ರಾಮಗಳಿಗೆ ಸಂಪರ್ಕವನ್ನು ಕಲ್ಪಿಸುವ ರಸ್ತೆಗಳಿಗೆ ಹಾನಿಯಾಗಿದ್ದಲ್ಲದೆ, ವಿಪರೀತ ಮಳೆ ಸುರಿಯುತ್ತಿರುವ ಕಾರಣದಿಂದಾಗಿ, ಬಡವರು ರಾತ್ರೋರಾತ್ರಿ ಸೂರು ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಗೋವಿನ ಜೋಳ ಹಾಗೂ ಇನ್ನಿತರ ಬೆಳೆಗಳಿಗೂ ಕೂಡಾ ಹಾನಿಯುಂಟಾಗಿರುವುದನ್ನು ಮನಗಂಡು ಕರ್ನಾಟಕ ಸಂಗ್ರಾಮ ಸೇನೆಯ ಕಲಘಟಗಿ ತಾಲ್ಲೂಕು ಘಟಕದಿಂದ ದಂಡಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ, ತ್ವರಿತಗತಿಯಲ್ಲಿ ಪರಿಶೀಲನೆ ನಡೆಸಿ, ಕ್ರಮ ಕೈಗೊಂಡು ಸೂಕ್ತ ಪರಿಹಾರವನ್ನು ದೊರಕಿಸಿಕೊಡಬೇಕಾಗಿ ಮನವಿಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾ ಅಧ್ಯಕ್ಷರಾದ ಸಾತಪ್ಪ ಕುಂಕೂರು, ಮಂಜುನಾಥ್ ನಂದಿಗಟ್ಟಿ, ಶಿವು ಓಲೇಕಾರ, ಸುಭಾಸ್ ಕಂಪ್ಲಿಕೊಪ್ಪ ಹಾಗೂ ಸೌಮ್ಯಾ ನಾಯಕ್ ಮಾರುತಿ ಸಾಲಿ ನದೀಮ್ ಜೆಟ್ಟಿ ಎಲ್ಲಪ್ಪ ಕಂಪ್ಲಿ ಕೊಪ್ಪ ಕಲ್ಮೇಶ್ ಹನುಮಣ್ಣವರ್ ಬಸು ಮುಗುಳಿ ಕಲ್ಲಪ್ಪ ಅರಸಿನಕೇರಿ ಶಂಕ್ರಣ್ಣ ತವರ ಗೆರೆ ಹಾಗೂ ತಾಲೂಕಿನ ರೈತರು ಭಾಗಿಯಾಗಿದ್ದರು
ವರದಿ:ವಿನಾಯಕ ಗುಡ್ಡದಕೇರಿ