ಸಿಂಧನೂರು : ಅ 28, ಭತ್ತ ಹತ್ತಿ ತೊಗರಿ ಜೋಳ ಮೆಣಸಿನಕಾಯಿ ಮೆಕ್ಕೆಜೋಳ ತೋಟಗಾರಿಕೆ ಬೆಳೆಗಳು ಸೇರಿದಂತೆ ಎಲ್ಲಾ ಉತ್ಪನ್ನಗಳ ಖರೀದಿ ಕೇಂದ್ರಗಳನ್ನು ನಿರಂತರ ಚಾಲ್ತಿಯಲ್ಲಿ ಇಡುವುದು ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿಸದಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸ ಬೇಕೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ಸುಲ್ತಾನಾಪುರ ಜಿಲ್ಲಾಧ್ಯಕ್ಷ ರಾಮಯ್ಯ ಜವಳಗೇರಾ ಮಾತನಾಡಿ ಈ ವರ್ಷ ಅತಿಯಾದ ಮಳೆಗೆ ಬೆಳೆಗಳು ಬಹುಪಾಲ ಭಾಗ ನಾಶವಾಗಿದ್ದು ನಷ್ಟಕ್ಕೆ ಈಡಾದ ಎಲ್ಲಾ ಬೆಳೆಗಳ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಬೇಕು ಕೃಷಿಗೆ ಸಾಲ ನೀಡಿದ ಹಣಕಾಸು ಸಂಸ್ಥೆಗಳು ಸಾಲವಸೂಲಾತಿಗಾಗಿ ರೈತರ ಮನೆ ಮುಂದೆ ಬಂದು ಗಲಾಟೆ ಮಾಡುವುದು ಮನೆಗಳಿಗೆ ನೋಟಿಸ್ ಅಂಟಿಸುವುದು ಜೊತೆಗೆ ಸ್ಥಳೀಯ ನ್ಯಾಯಲಯ ದಲ್ಲಿ ರೈತರ ಮೇಲೆ ದಾವೇ ಹೊಡಿ ಕ್ರಿಮಿನಲ್ ಕೇಸ್ ದಾಖಲಿಸಿ ಒಳ ದಬ್ಬುವ ಸಂಚು ಮಾಡುತ್ತಿದ್ದಾರೆ.
ಈ ಕಾರಣಕ್ಕಾಗಿ ರೈತರ ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ ಆದ ಕಾರಣ ರೈತರ ಎಲ್ಲಾ ಬ್ಯಾಂಕ್ ಗಳ ಕೃಷಿ ಸಾಲ ಸಂಪೂರ್ಣ ಸಂಪೂರ್ಣ ಮನ್ನ ಮಾಡಬೇಕು ಹಾಗೂ ರೈತರ ಆತ್ಮಹತ್ಯೆ ತಡೆಯಲು ಡಾ. ಎಂ ಎಸ್. ಸ್ವಾಮಿನಾಥ್ ವರದಿ ಜಾರಿಗೊಳಿಸ ಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟಗಳು ಪ್ರತಿಭಟಿಸಿ ತಹಶೀಲ್ದಾರ್ ಮುಖಾಂತರ ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ರವಾನಿಸಲಾಯಿತು.

ಈ ಸಂದರ್ಭದಲ್ಲಿ, ತಾಲೂಕ ಅಧ್ಯಕ್ಷ ನಾಗಪ್ಪ ಬೂದಿವಾಳ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಪ್ಪ ದೇವಸುಗೂರು. ರಾಯಚೂರ ತಾಲೂಕ ಅಧ್ಯಕ್ಷ ಚನ್ನಪ್ಪ ಹುಣಸಿಹಾಳಹುಡ. ಮಸ್ಕಿ ತಾಲೂಕ ಅಧ್ಯಕ್ಷ ವೆಂಕಟೇಶ್ ರತ್ನಾಪುರ ಹಟ್ಟಿ. ಸೇರಿದಂತೆ ಅನೇಕರು ಇದ್ದರು




