ಮೊಳಕಾಲ್ಮೂರು : ಬಿ.ಜಿ.ಕೆರೆ ವಸುಂದರ ಫಾರಂ ಎಸ್ ವೀರಭದ್ರಪ್ಪನವರ ತೋಟದಲ್ಲಿ ತೆಂಗಿನ ಮರದಿಂದ ನೀರ ಇಳಿಸಿ ಮಾರಾಟ ಮಾಡುತ್ತಿರುವುದನ್ನು ಜಿಲ್ಲಾ ಮತ್ತು ತಾಲೂಕು ಅಬಕಾರಿ ಇಲಾಖೆ ಅಧಿಕಾರಿಗಳು ರೈತನ ತೋಟಕ್ಕೆ ಹೋಗಿ ನೀರ ಇಳಿಸಬಾರದು ಎಂದು ನಾಮಫಲಕ ಹಾಗೂ ಇತರೆ ಪರಿಕರಗಳನ್ನು ಹಾಳು ಮಾಡಿ ರೈತನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಬೆದರಿಕೆ ಒಡ್ಡಿರುವುದು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ರಾಜ್ಯ ಕಾರ್ಯಧ್ಯಕ್ಷರಾದ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಅಬಕಾರಿ ಇಲಾಖೆ ವಿರುದ್ಧ ಅಕ್ರೋಶ ಅವರ ಹಾಕಿದರು.
ಪಟ್ಟಣದಲ್ಲಿ ಮಂಗಳವಾರ ಅಬಕಾರಿ ಇಲಾಖೆ ಮುಂದೆ ಪ್ರತಿಭಟನೆ ಮಾಡಿ ಅವರು ಮಾತನಾಡಿದರು. ವೀರಭದ್ರಪ್ಪ ತೋಟಕ್ಕೆ ಅದರದೇ ಆದ ಇತಿಹಾಸವಿದೆ, ಆ ತೋಟದಲ್ಲಿ ಯಾವುದೇ ಅಕ್ರಮಗಳು ನಡೆಯುವುದಿಲ್ಲ, ರೈತರನ್ನು ಕಡೆಗಣಿಸದೆ ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದರು. ಈ ತೋಟದಲ್ಲಿ ಗಂಧದ ಮರ ಹುಣಸೆ ಮುಂತಾದ ಗಿಡ ಔಷಧಿ ಯುಕ್ತ ಗಿಡಗಳು ಮರಗಳು ಬೆಳೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಈ ತೋಟವು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ ಇಲ್ಲಿ ಎಷ್ಟೋ ಜನಗಳಿಗೆ ಕೆಲಸ ಸಿಕ್ಕಿದೆ.
ಇಂತಹ ತೋಟವನ್ನು ನಡೆಸುತ್ತಿರುವ ಇವರು ಅಧಿಕಾರಿಗಳು ಕ್ಷಮೆಯಾಚಿಸಬೇಕು ನೀರ ಕಲ್ಪರಸ ಉತ್ತಮವಾಗಿ ಯಾವುದೇ ಮಿಶ್ರಿತವಿಲ್ಲದೆ ಜನಗಳಿಗೆ ನೀಡುತ್ತಿದ್ದಾರೆ.
ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರವನ್ನು ಒತ್ತಾಯಿಸುತಿದ್ದೇವೆ ಪ್ರತಿ ಹಳ್ಳಿಯಲ್ಲಿ ಪ್ರತಿ ಕಿರಾಣಿ ಅಂಗಡಿಗಳಲ್ಲಿ ಪ್ರತಿಯೊಂದು ಅಂಗಡಿ ಮುಗ್ಗಟ್ಟುಗಳಲ್ಲಿ ಮಧ್ಯದ ಬಾಟಲುಗಳು ದೊರೆಯುತ್ತಿದ್ದು ಅವರಿಗೆ ಕಡಿವಾಣ ಹಾಕಬೇಕು, ಅದನ್ನು ಬಿಟ್ಟು ರೈತರನ್ನು ಕೆಣಕಬೇಡಿ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರವಿಕುಮಾರ್ ಮಾತನಾಡಿ, ನೀರ ಒಂದು ಉತ್ತಮ ಪಾಯ ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ, ಈ ತೋಟಕ್ಕೆ ನೂರಾರು ಅಧಿಕಾರಿಗಳು ರಾಜಕಾರಣಿಗಳು ಭೇಟಿ ನೀಡುತ್ತಾರೆ ಇಂತಹ ರೈತರನ್ನು ಕೆಣಕಬೇಡಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳು, ಪಾಪಯ್ಯ ನಾಗೇಂದ್ರಪ್ಪ ತಿಪ್ಪೇಸ್ವಾಮಿ ವಿನಾಯಕ ವೆಂಕಟೇಶ್ ನಾಯಕ್ ತಾನಪ್ಪ ಚಂದ್ರಣ್ಣ ವೀರಭದ್ರಪ್ಪ ರಾಜಣ್ಣ, ಅಬಕಾರಿ ಇನ್ಸ್ಪೆಕ್ಟರ್ರಾದ ಮಲ್ಲಿಕಾರ್ಜುನ್, ಅಬಕಾರಿ ಸಿಬ್ಬಂದಿ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




