Ad imageAd image

ಆಲಮಟ್ಟಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ , ಪ್ರೌಢಶಾಲಾ ವಿಭಾಗದ ಬೆಳಗಾವಿ ವಿಭಾಗ ಮಟ್ಟ ,ಕರ್ನಾಟಕ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ

Bharath Vaibhav
ಆಲಮಟ್ಟಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ , ಪ್ರೌಢಶಾಲಾ ವಿಭಾಗದ ಬೆಳಗಾವಿ ವಿಭಾಗ ಮಟ್ಟ ,ಕರ್ನಾಟಕ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ
WhatsApp Group Join Now
Telegram Group Join Now

ಆಲಮಟ್ಟಿ:-ಆಲಮಟ್ಟಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬೆಳಗಾವಿ ವಿಭಾಗ ಮಟ್ಟ ಹಾಗೂ ಕರ್ನಾಟಕ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗಳು ನ.11 ರಿಂದ ನಾಲ್ಕು ದಿನಗಳ ಕಾಲ ಜರುಗಲಿವೆ.

ಆಲಮಟ್ಟಿಡ್ಯಾಂಸೈಟ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಮೈದಾನದಲ್ಲಿ ಈ ಪಂದ್ಯಾವಳಿಗಳು ಜರುಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹಾಗೂ ಕ್ರೀಡಾಕೂಟದ ಸಂಘಟನೆಯ ಉಸ್ತುವಾರಿ ವಹಿಸಿಕೊಂಡಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಶಾಲೆಯ ಮೈದಾನದಲ್ಲಿ ನಾಲ್ಕು ಖೋಖೋ ಸ್ಪರ್ಧೆಗಳು ಏಕಕಾಲದಲ್ಲಿಯೇ ಜರುಗುವಂತೆ ನಾಲ್ಕು ಖೋಖೋ ಮೈದಾನ ನಿರ್ಮಿಸಲಾಗುತ್ತಿದೆ.ಕ್ರೀಡಾಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ.ನಾಲ್ಕು ಕಡೆ ಎಲ್ ಇಡಿ ಪರದೆಗಳ ಮೂಲಕ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಅವಿಭಜಿತ ಬಸವನಬಾಗೇವಾಡಿ ತಾಲ್ಲೂಕಿನ ಇತಿಹಾಸದಲ್ಲಿಯೇ ರಾಜ್ಯ ಮಟ್ಟದ ಪಂದ್ಯಾವಳಿಗಳನ್ನು ಸಂಘಟಿಸುತ್ತಿರುವುದು ಇದೇ ಪ್ರಥಮ, ರಾಜ್ಯದ ನಾನಾ ಕಡೆಯಿಂದ ಕ್ರೀಡಾಪಟುಗಳು ಆಗಮಿಸಲಿದ್ದು, ಕ್ರೀಡಾಕೂಟ ಸ್ಮರಣೀಯವಾಗಿಸಲು ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್. ಎಸ್. ಅವಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಚ್. ಬಿರಾದಾರ, ಶಿಕ್ಷಣ ಸಂಯೋಜಕ ಯು.ವೈ.ಬಶೆಟ್ಟಿ, ಬಸವರಾಜ ಯರವಿನತೆಲಿಮಠ, ಎಂ.ಆರ್. ಮಕಾನದಾರ, ಎಂ.ಎಂ. ಮುಲ್ಲಾ, ಸಲೀಂ ದಡೆದ, ಆರ್.ಬಿ.ಗೌಡರ, ವಿ.ಕೆ.ಮಸೂತಿ..ಇದ್ದರು.

ವರದಿ :-ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!