Ad imageAd image

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿAದ ಪ್ರತಿಭಟನೆ

Bharath Vaibhav
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿAದ ಪ್ರತಿಭಟನೆ
WhatsApp Group Join Now
Telegram Group Join Now

ಮಾನ್ವಿ: -ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಜಲ್ಲಿ ಹನುಮಂತಪ್ಪನಾಯಕ ಮಾತನಾಡಿ ರಾಜ್ಯದ ಕಂದಾಯ ಇಲಾಖೆಯು ಅಭಿವೃದ್ದಿ ಪಡಿಸಿರುವ 17 ಕ್ಕೂ ಅಧಿಕ ಮೋಬೈಲ್ ,ವೆಬ್ ತಂತ್ರಾAಶಗಳ ಮೂಲಕ ಕರ್ತವ್ಯವನ್ನು ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ನಿರ್ವಹಿಸಬೇಕಾಗಿರುವುದರಿಂದ ನೂತನ ಮೋಬೈಲ್ ಸಾಧನ,ಲ್ಯಾಪ್ ಟಾಪ್, ಇಂಟರೆನೆಟ್ , ಸ್ಕಾö್ಯನರ್,ಗೂಗಲ್ ಕ್ರೋಮ್ ಬುಕ್,ಪ್ರಿಂಟರ್ ಪರಿಕರಗಳನ್ನು ಒದಗಿಸಬೇಕು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗೆ ಅಗತ್ಯವಿರುವ ಎಲ್ಲಾ ಮೂಲಭೂತಸೌಲಭ್ಯಗಳನ್ನು ಕಲ್ಪಿಸಬೇಕು.

ಹಾಗೂ ಪದೋನ್ನತಿಯನ್ನು ಕಲ್ಪಿಸಬೇಕು, 3 ವರ್ಷಗಳ ಕಾಲ ಸೇವೆಸಲ್ಲಿಸಿದವರಿಗೆ ಅಂತರ್ ಜಿಲ್ಲಾ ವರ್ಗವಣೆಗಾಗಿ ಮಾರ್ಗಸೂಚಿಯನ್ನು ರೂಪಿಸಬೇಕು. ಆಯುಕ್ತಾಲಯದ ಅಡಿಯಲ್ಲಿ ರಾಜ್ಯ ಮಟ್ಟದ ಜೇಷ್ಟತೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಟತೆಯನ್ನು ಪರಿಗಣಿಸಬೇಕು ಗ್ರಾಮ ಸಹಾಯಕರಿಗೆ ಸೇವಭದ್ರತೆಯನ್ನು ಒದಗಿಸಬೇಕು ಹಾಗೂ ಕಂದಾಯ ಇಲಾಖೆಯಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಉಪತಹಸೀಲ್ದಾರ್‌ಗಳಾದ ವಿನಾಯಕ್ ರಾವ್,ವಿರುಪಣ್ಣ, ವಾಸವಿ,ಪ್ರಾ.ಶಾ.ಶಿ.ಸಂಘದ ತಾ.ಅಧ್ಯಕ್ಷರಾದ ಸಂಗಮೇಶ ಮುಧೋಳ್ ,ಹನುಮಂತರಾವ್ ಬೆಂಬಲ ನೀಡಿದರು.ತಾ.ಪ್ರ.ಕಾರ್ಯದರ್ಶಿ ಅಮರೇಶ ನೀರಮಾನ್ವಿ. ಸದಸ್ಯರಾದ ಮಹಮ್ಮದ್ ಅಬ್ದುಲ್ ಗಫೂರ್ ಸಾಬ್, ಮೌನೇಶ, ಸುಶೀಲಾ, ರಾಧ, ಶ್ವೇತ, ಸಿಂಧೂ, ಕುಸುಮ ,ಶ್ರೀಕಾಂತ, ಅಶೋಕ , ರಮೇಶ, ಯಲ್ಲಪ್ಪ, ಸೋಯಬ್, ಸೇರಿದಂತೆ ಗ್ರಾಮ ಸಹಾಯಕರು ಇನ್ನಿತರರು ಇದ್ದರು.

ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ವರದಿ:- ಶಿವ ತೇಜ

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!