ರಾಜಕೋಟ: ಕರ್ನಾಟಕ ಕ್ರಿಕೆಟ್ ತಂಡವು ಸೌರಾಷ್ಟ್ರ ವಿರುದ್ಧ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆ ಪಡೆಯಲು ಸ್ವಲ್ಪದರಲ್ಲಿಯೇ ಎಡವಿತು.
ಇಲ್ಲಿನ ಕಾಂಧೇರಿಯ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡದ ಮೊದಲ ಇನ್ನಿಂಗ್ಸ್ ಮೊತ್ತವಾದ 372 ಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಸೌರಾಷ್ಟ್ರ 376 ರನ್ ಗಳಿಗೆ ಆಲೌಟಾಗಿ 4 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆಯಲು ಯಶಸ್ವಿಯಾಯಿತು. ಪಂದ್ಯದ ಮೂರನೇ ದಿನದ ಆಟ ಮುಗಿದಾಗ ಕರ್ನಾಟಕ ತನ್ನ ದ್ವಿತೀಯ ಸರದಿಯಲ್ಲಿ 1 ವಿಕೆಟ್ ಗೆ 89 ರನ್ ಗಳಿಸಿದ್ದು, 85 ರನ್ ಗಳ ಒಟ್ಟಾರೆ ಮುನ್ನಡೆ ಪಡೆದಿದೆ.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 372 ಹಾಗೂ 1 ವಿಕೆಟ್ ಗೆ 89
ಮಯಾಂಕ್ ಅಗರವಾಲ್ ಬ್ಯಾಟಿಂಗ್ 31, ದೇವದತ್ತ ಪೆಡಿಕಲ್ ಬ್ಯಾಟಿಂಗ್ 18, ನಿಖೀನ್ ಜೋಷ್ 34
ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 376 ( ಶ್ರೇಯಸ್ ಗೋಪಾಲ್ 110 ಕ್ಕೆ 8




