———————————–ಚಂದಿಗಢ ವಿರುದ್ಧದ ರಣಜಿ ಪಂದ್ಯ
ಹುಬ್ಬಳ್ಳಿ: ಕರ್ನಾಟಕ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಚಂಧಿಗಡ ವಿರುದ್ಧ ಆಡುತ್ತಿದ್ದು, ಎರಡನೇ ದಿನದಾಂತ್ಯಕ್ಕೆ ಉತ್ತಮ ಸ್ಥಿತಿಯಲ್ಲಿದೆ.

ಶ್ರೇಯಸ್ ಗೋಪಾಲ್ 18 ಕ್ಕೆ 3
ಇಲ್ಲಿನ ಕೆ.ಎಸ್. ಸಿ.ಎ ಕ್ರೀಡಾಂಗಣದಲ್ಲಿ ಎರಡನೇ ದಿನದಾಟ ಮುಗಿದಾಗ ಚಂಧಿಗಡ ತಂಡವು 4 ವಿಕೆಟ್ ಗೆ 72 ರನ್ ಗಳಿಸಿದ್ದು, ಕರ್ನಾಟಕ ತಂಡದ ಮೊದಲ ಇನ್ನಿಂಗ್ಸ್ ಮೊತ್ತವನ್ನು ಹಿಂದೆ ಹಾಕಲು ಉಳಿದ 6 ವಿಕೆಟ್ ಗಳಿಂದ 475 ರನ್ ಗಳಿಸಬೇಕಿದೆ. ಹೀಗಾಗಿ ಆತಿಥೇಯ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆಯಂತೂ ಬಹುತೇಕ ಖಚಿತ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ ಸದ್ಯ 14 ಪಾಯಿಂಟ್ ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಮಹಾರಾಷ್ಟ್ರ 15 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇಲ್ಲಿ ಕರ್ನಾಟಕ ಇನ್ನಿಂಗ್ಸ್ ಗೆಲುವನ್ನು ಪಡೆಯುವ ಸಾಧ್ಯತೆಯೂ ಇದೆ.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 8 ವಿಕೆಟ್ ಗೆ 547 ಡಿಕ್ಲೇರ್
ಚಂಧಿಗಡ ಮೊದಲ ಇನ್ನಿಂಗ್ಸ್ 4 ವಿಕೆಟ್ ಗೆ 72
ಅರ್ಜುನ್ ಆಜಾದ 32, ಶ್ರೇಯಸ್ ಗೋಪಾಲ್ 18 ಕ್ಕೆ 3




