ಬೆಂಗಳೂರು: ಪ್ರಸಕ್ತ ರಣಜಿ ಕ್ರಿಕೆಟ್ ಖುತುವಿನಲ್ಲಿ ನಾಲ್ಕು ಲೀಗ್ ಪಂದ್ಯಗಳು ಮುಗಿದಿದ್ದು, ಎಲೈಟ್ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡವು ನಾಲ್ಕು ಲೀಗ್ ಪಂದ್ಯಗಳಿಂದ 14 ಅಂಕಗಳಿಸಿದ್ದು, ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ.
ಮಂಗಳವಾರ ಮುಗಿದ ನಾಲ್ಕನೇ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಪಂದ್ಯ ಡ್ರಾ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ 3 ಪಾಯಿಂಟ್ ಗಳಿಕೆ ಮಾಡಿ ನಾಲ್ಕು ಲೀಗ್ ಪಂದ್ಯಗಳಿಂದ ಒಟ್ಟು 14 ಅಂಕಗಳೊಂದಿಗೆ ‘ಬಿ’ ಗುಂಪಿನ ತಂಡಗಳ ಪೈಕಿ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆರಿದೆ.




