ರಾಜಕೋಟ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಪ್ರಸಕ್ತ ಸಾಲಿನ ಮೊದಲ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಸೌರಾಷ್ಟ್ರ ತಂಡದ ವಿರುದ್ಧ ಎರಡನೇ ದಿನ 9 ವಿಕೆಟ್ ಗೆ 345 ರನ್ ಗಳಿಸಿತ್ತು.

ಇಲ್ಲಿನ ನಿರಂಜನ್ ಶಹಾ ಕ್ರೀಡಾಂಗಣದಲ್ಲಿ ಮೊದಲ ದಿನವಾದ ಬುಧವಾರ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡವು ಮೊದಲ ದಿನ ಆಟ ಮುಗಿದಾಗ 5 ವಿಕೆಟ್ ಗೆ 295 ರನ್ ಗಳಿಸಿತ್ತು.
ಆದರೆ ಇಂದು ಎರಡನೇ ದಿನ ಮೊದಲ ಅವಧಿಯ ಆಟದಲ್ಲಿ 50 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡಿತು. ಕರ್ನಾಟಕ ತಂಡದ ಪರವಾಗಿ ನಾಯಕ ಮಯಾಂಕ್ ಅಗರವಾಲ್ ನಿರಾಶೆ ಮೂಸಿದರು. ಆದರೆ ದೇವದತ್ತ ಪೆಡಿಕಲ್ 96 ( 11 ಬೌಂಡರಿ) ಹಾಗೂ ಮತ್ತೇ ಕರ್ನಾಟಕ ತಂಡಕ್ಕೆ ಮರಳಿರುವ ಕರುಣ್ ನಯ್ಯರ 73 ( 9 ಬೌಂಡರಿ, ಉತ್ತಮ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಉತ್ತಮ ಮೊತ್ತವನ್ನು ಸೇರಿಸಲು ಸಾಧ್ಯವಾಯಿತು.




