ಹಲ್ಯಾಳ : ಅಥಣಿ ಪಟ್ಟಣದಲ್ಲಿ ದಿನಾಂಕ ಅಕ್ಟೊಬರ್ 5ರಂದು ಬೆಳಗ್ಗೆ 11 ಗಂಟೆಗೆ ಅಥಣಿಯ ಚೈನಿ ಆಸ್ಪತ್ರೆಯ ಹತ್ತಿರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಕಾರ್ಯಾಲಯವನ್ನು ಉದ್ಘಾಟನೆ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಥಣಿ ಹಾಗೂ ಕಾಗವಾಡ ತಾಲೂಕ ಅಧ್ಯಕ್ಷರಾದ ಅಲ್ಲಾವುದ್ದೀನ್ ಶೇಕ್ ಮಾಧ್ಯಮ ಮಿತ್ರರಿಗೆ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿಯ ಶಾಸಕರಾದ ಲಕ್ಷ್ಮಣ್ ಸವದಿ ಹಾಗೂ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಕಾಗವಾಡ ಮತಕ್ಷೇತ್ರದ ಶಾಸಕರಾದ ಭರಮಗೌಡ (ರಾಜು) ಕಾಗೆ ಅವರು ಉದ್ಘಾಟಿಸಲಿದ್ದಾರೆ ಮತ್ತು ತಾಲೂಕ ಅಧಿಕಾರಿಗಳು ಕೂಡಾ ಭಾಗವಹಿಸಲಿದ್ದಾರೆ.
ಪ್ರಬುದ್ಧ ರಾಷ್ಟ್ರದ ನಿರ್ಮಾಣಕ್ಕೆ ಮಾಧ್ಯಮದ ಪಾತ್ರ ಬಹುಮುಖ್ಯವಾಗಿದೆ ಕಾರಣ ಪಕ್ಷತೀತವಾಗಿ, ಜಾತ್ಯಾತೀತವಾಗಿ ಅವರಿವರನ್ನದೆ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘದ ಸದಸ್ಯರು ಉಮರ್ ಮೊಮಿನ್ ಹೇಳಿದರು.
ಗೌರಧ್ಯಕ್ಷರು ರಾಶಿದ್ ಶೇಖ ಉಪಾಧ್ಯಕ್ಷರು ಅಜಯ ಬ ಕಾಂಬಳೆ, ವಿಠ್ಠಲ ಖೋಕಾಟೆ,ಶಶಿಕಾಂತ ಪುಂಡಿಪಲ್ಲೇ, ಹನಮಂತ ಬಿ ಕುರಬರ, ರಮೇಶ್ ಕಾಂಬಳೆ,ಲಕ್ಷ್ಮಣ ಮೂಕಿ , ಆನಂದ ಬಿರಾದರ,. ಶಿವರಾಯ ಕರಕರಮುಂಡಿ, ಬಸೀರ್ ಸೈಯದ,ಸಂತೋಷ್ ಹೊನಕಾಂಡೆ ಮತ್ತು ಇತರರಿದ್ದರು.
ವರದಿ :ಅಜಯ ಕಾಂಬಳೆ




