ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಬೆರಳು ನೋವಿಗೆ ತುತ್ತಾಗಿರುವ ಕರುಣ ನಯ್ಯರ ಮುಂಬರುವ ದುಲೀಪ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ಓವೆಲ್ ನಲ್ಲಿ ನಡೆದ ಕಡೆಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ವೇಗವಾಗಿ ಪುಟಿದೆದ್ದು ಬಂದ ಚೆಂಡನ್ನು ಎದುರಿಸುವಾಗ ಕರುಣ್ ನಯ್ಯರ ಬೆರಳಿಗೆ ಸ್ವಲ್ಪದಾಗಿ ಗಾಯ ಮಾಡಿಕೊಂಡಿದ್ದಾರೆ. 33 ರ ಹರೆಯದ ಕರುಣ್ ನಯ್ಯರ ಅವರು ವಿದರ್ಭಾ ತಂಡದಿಂದ ಮತ್ತೇ ಕರ್ನಾಟಕ ತಂಡಕ್ಕೆ ಮರಳಿದ್ದು, ಇಂಗ್ಲೆಂಡಿನಲ್ಲಿ 4 ಟೆಸ್ಟ್ ಪಂದ್ಯಗಳಿಂದ 25.62 ರ ಸರಾಸರಿಯಲ್ಲಿ 205 ರನ್ ಗಳಿಸಿದ್ದರು. ಇದರಲ್ಲಿ ಒಂದು ಅರ್ಧ ಶತಕವೂ ಸೇರಿದೆ.




