Ad imageAd image

ಕಳಸಾ-ಬಂಡೂರಿ ಯೋಜನೆಗೆ ತುಕ್ಕು ಹಿಡಿಯಿತೇ ?

Bharath Vaibhav
ಕಳಸಾ-ಬಂಡೂರಿ ಯೋಜನೆಗೆ ತುಕ್ಕು ಹಿಡಿಯಿತೇ ?
WhatsApp Group Join Now
Telegram Group Join Now

ಕಣಕುಂಬಿ: ಹೌದು ಕಿತ್ತೂರು ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಜೀವನದಿ ಅಂದ್ರೆ ಇದೇ ನೋಡ್ರಿ ನಮ್ಮ ಹೆಮ್ಮೆಯ ಮಲಪ್ರಭಾ ನದಿ. ಮಲಪ್ರಭಾ ನದಿಯು ಪುರಾತನ ಕಾಲದಿಂದಲೂ ಸಹ ಕಣಕುಂಬಿಯಲ್ಲಿ ಹುಟ್ಟಿ ಖಾನಾಪುರ, ಕಿತ್ತೂರು, ಬೈಲಹೊಂಗಲ ಹಾಗೂ ಸವದತ್ತಿಗಳನ್ನು ದಾಟಿ ನವಿಲು ತೀರ್ಥ ಅಣೆಕಟ್ಟಿನಲ್ಲಿ ಮಿಂದೆದ್ದು ನಂತರ ನರಗುಂದ, ನವಲಗುಂದ, ಧಾರವಾಡ, ಹುಬ್ಬಳ್ಳಿ, ರೋಣ ಹೀಗೆ ಹತ್ತು ಹಲವು ತಾಲ್ಲೂಕುಗಳನ್ನು ದಾಟಿ ಕೂಡಲ ಸಂಗಮದಲ್ಲಿ ಕೃಷ್ಣ ನದಿಗೆ ಸೇರುತ್ತೆ.

ಆದ್ರೆ ಆದ್ರೇ ಬಹುಶಃ ಭಾಗಶಃ ಇಂತಹ ಮಲಪ್ರಭಾ ನದಿಗೆ ಜೀವ ತುಂಬುವ ಕೆಲಸವನ್ನು ಮಾಡಿ ರೈತಾಪಿವರ್ಗಕ್ಕೆ ಹಾಗೂ ಜನೋಪಯೋಗಿ ಕೆಲಸಕ್ಕೆ ಅನುಕೂಲವಾಗುವುದಕ್ಕೆ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲೇ ಹುಟ್ಟುವ ಕಳಸ ಬಂಡೂರಿ ನಾಲೆಗಳನ್ನು ಮಲಪ್ರಭಾ ನದಿಗೆ ಸೇರಿಸುವುದರ ಮೂಲಕ 7.56 ಟಿ.ಎಂ.ಸಿ ನೀರನ್ನು ಹರಿಸಿಕೊಳ್ಳಲು 2002 ರಲ್ಲಿದ್ದ ಎಸ್.ಎಂ ಕೃಷ್ಣ ಸರ್ಕಾರ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಿತು.

ಆದ್ರೇ ದುರ್ದೈವ ಎಂದ್ರೆ ನೆರೆಯ ಗೋವಾ ಸರ್ಕಾರದ ಮುಖ್ಯ ಮಂತ್ರಿ ಮನೋಹರ್ ಪರಿಕ್ಕರ್ ಕ್ಯಾತೆ ತೆಗೆದು ಈ ಯೋಜನೆಗೆ ತಡೆಯಾಜ್ಞೆ ತಂದರು. ಅಲ್ಲಿಂದ ಹೋರಾಟ ಪ್ರಾರಂಭವಾಗಿ ಇಲ್ಲಿಯವರೆಗೂ ಸಹ ಆಗೇ ಬಂದಿವೆ. ಇನ್ನೊಂದು ಕಡೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಕಳಸ ಹಾಗೂ ಬಂಡೂರಿ ಯೋಜನೆಗೆ ತಲಾ 45 ಕೋಟಿ ಗಳ ವೆಚ್ಚದ ಕಾಮಗಾರಿ ಯನ್ನು 5 ಕಿಲೋಮೀಟರ್ ವರೆಗೆ ಭೂಮಿಯಲ್ಲಿ ಸುರಂಗ ಮಾರ್ಗದ ಕಾಲುವೆಯನ್ನು ಕೊರೆದು ಅಲ್ಲಿಂದ ಮಲಪ್ರಭಾ ನದಿಗೆ ಸೇರಿಸಲು ಪ್ರಯತ್ನ ಕಾಮಗಾರಿ ಪೂರ್ಣಗೊಳಿಸಿದರು.

ಆದ್ರೆ ಅಲ್ಲೂ ಸಹ ಗೋವಾ ಸರ್ಕಾರವು ಕೋರ್ಟ್ ನಲ್ಲಿ ತಡೆಯಾಜ್ಞೆ ತೆಗೆದುಕೊಂಡು ಬಂದು ಈ ಯೋಜನೆಯ ಕಾಮಗಾರಿಯನ್ನು ಬಂದ್ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಬರೀ ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮ ಕರ್ನಾಟಕದಲ್ಲಿ ಎಲ್ಲಾ ಪಕ್ಷಗಳು ಕೂಡ ಚುನಾವಣೆ ಅಸ್ತ್ರವಾಗಿ ಬಳಸಿಕೊಂಡು ಕೈ ಬಿಡುತ್ತಿವೆ. ಇನ್ನೊಂದು ಕಡೆ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿರುವ ರಾಜಕೀಯ ಪಕ್ಷಗಳು ಕೂಡ ಚುನಾವಣಾ ಸಂದರ್ಭದಲ್ಲಿ ಈ ಯೋಜನೆ ಬಗ್ಗೆ ಪೊಲಿಟಿಕಲ್ ಮೈಲೇಜ್ ಗಾಗಿ ಬಳಸಿಕೊಳ್ಳುತ್ತಿವೆ.

————ಆರ್.ಬಿ ಮರಾಟೆ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು. ಕಳಸಾ ಬಂಡೂರಿ ಯೋಜನೆ

ಆದ್ರೇ ವಿಧಿ ಏನಂದ್ರೆ ಅಲ್ಲಿಂದ ಇಲ್ಲಿಯವರೆಗೂ ಕೂಡ ಈ ರೈತಾಪಿ ಯೋಜನೆ ಹಾಗೂ ಕುಡಿಯುವ ನೀರಿನ ಯೋಜನೆ, ಜನಪರ ಯೋಜನೆಗೆ ಯಾವ ರಾಜಕೀಯ ಪಕ್ಷಗಳು ಇರಲಿ, ಯಾವೊಬ್ಬ ಸಂಸದರು ಕೂಡ ಸಂಸತ್ ನಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತದೇ ತುಂಬಾ ಬೇಸರದ ಸಂಗತಿಯಾಗಿದೆ. ಇನ್ನೊಂದು ಕಡೆ ಈ ಯೋಜನೆಯ ಹೋರಾಟದ ಹೆಸರೇಳಿ ಸ್ವಾರ್ಥಕ್ಕೆ ಬಳಸಿಕೊಂಡು ಈ ಭಾಗದಲ್ಲಿ ಶಾಸಕರು ಆಗಿದ್ದಾರೆ, ಮಂತ್ರಿಗಳು ಆಗಿದ್ದಾರೆ.

ಇನ್ನೊಂದು ಕಡೆ ಈ ಯೋಜನೆ ಅನುಷ್ಠಾನಕ್ಕೆ ಬರಲು ರೈತಾಪಿವರ್ಗದ ಸಂಘಗಳು, ವಿವಿಧ ಸಂಘಟನೆಗಳು ಹಾಗೂ ಜನತೆಯ ವತಿಯಿಂದ ಅಹೋರಾತ್ರಿ ಹೋರಾಟಗಳು, ಅನಿರ್ದಿಷ್ಟವಧಿ ಸತ್ಯಾಗ್ರಹಗಳು ನಡೆದು ಹಲವು ಹೋರಾಟಗಾರರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇನ್ನೂ ಕೆಲವರು ಜೈಲು ಶಿಕ್ಷೆ ಅನುಭವಿಸಿ ಕೋರ್ಟಿಗೆ ಇಂದಿಗೂ ಹೋರಾಟ ಮಾಡುತ್ತಿದ್ದಾರೆ. ಆದ್ರೇ ಈ ಕಳಸಾ- ಬಂಡೂರಿ ಯೋಜನೆ ಮಾತ್ರ ಜಾರಿಗೆ ಬರಲೇ ಇಲ್ಲಾ, ಇನ್ನೊಂದು ಕಡೆ ಇಲ್ಲಿ ಕಾಮಗಾರಿಗೆ ತಂದಿದ್ದ ಕಬ್ಬಿಣ ಸೇರಿದಂತೆ ಎಲ್ಲಾ ಕಚ್ಚಾ ವಸ್ತುಗಳು ತುಕ್ಕು ಹಿಡಿದು ಈ ಯೋಜನೆಗೂ ತುಕ್ಕು ಹಿಡಿದು ಬಿಡ್ತೇನೋ ಅನಿ ಸುತ್ತಾ ಇದೆ. ಇನ್ನೊಂದು ಮಾಡಿದ್ದ ಅರೆಬರೆ ಕಾಮಗಾರಿ ಗಳೆಲ್ಲಾ ಕುಸಿದು ಬೀಳ್ತಾ ಇವೆ.

ಆದ್ರೆ ಕಳಸಾ ಬಂಡೂರಿ ಯೋಜನೆಗೆ ಕಾಯಕಲ್ಪ ಭಾಗ್ಯ ಮಾತ್ರ ಪ್ರದಾನ ಮಂತ್ರಿಯಿಂದ ಹಿಡಿದು ಜನಪ್ರತಿನಿದಿಯವರೆಗೂ ಯಾರು ಸಹ ಪ್ರಾಮಾಣಿಕ ಪ್ರಯತ್ನ ಮಾಡದೇ ಕಾನೂನು ಹೋರಾಟ ಮಾಡಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಈ ಸ್ಥಳಕ್ಕೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ.

ವರದಿ: ಬಸವರಾಜು 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!