Ad imageAd image

ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ 1.20 ಲಕ್ಷ ರೂ. ದಂಡ 

Bharath Vaibhav
ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ 1.20 ಲಕ್ಷ ರೂ. ದಂಡ 
WhatsApp Group Join Now
Telegram Group Join Now

ಬೆಂಗಳೂರು: 12 ವರ್ಷದ ಹಿಂದಿನ ಪ್ರಕರಣದಲ್ಲಿ ಈಗ ಸಿಟಿ ಸಿವಿಲ್ ನ್ಯಾಯಾಲಯ ಈಗಿನ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ, ಅಂದಿನ ದೂರದರ್ಶನ ಕೇಂದ್ರದ ನಿರ್ದೇಶಕರಾಗಿದ್ದ ಮಹೇಶ್ ಜೋಶಿಗೆ 1.20 ಲಕ್ಷ ದಂಡ ವಿಧಿಸಿದೆ.

ಈ ಪ್ರಕರಣ1984 ರ ಹಿನ್ನಲೆ ಹೊಂದಿದ್ದು, ದೂರದರ್ಶನದ ನಿರ್ದೇಶಕರಾಗಿದ್ದಾಗ ಮಹೇಶ್ ಜೋಶಿ, ತಮ್ಮ ಸಹೋದ್ಯೋಗಿಗಳಾದ ಮೋಹನ್ ರಾಂ ಸೇರಿ ಒಟ್ಟು ಏಳು ಜನರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.ಆದರೆ ಆ ಪ್ರಕರಣ ಸುಳ್ಳು ಎಂದು 2013 ರಲ್ಲಿ ಹೈಕೋರ್ಟ್ ತೀರ್ಪು ನೀಡಿ ಪ್ರಕರಣವನ್ನು ವಜಾಗೊಳಿಸಿತ್ತು.

ಆ ನಂತರ ಮೋಹನ್ ರಾಂ ಅವರು, ಈ ಸುಳ್ಳ ಪ್ರಕರಣದಿಂದ ತಮಗೆ ಉಂಟಾಗಿದ್ದ ಮಾನಸಿಕ ಹಿಂಸೆ ಹಾಗೂ ಆರ್ಥಿಕ ನಷ್ಟಕ್ಕೆ ಪರಿಹಾರವಾಗಿ

1.20 ಲಕ್ಷ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ 14ನೇ ಸಿವಿಲ್ ನ್ಯಾಯಾಲಯ ಈ ಆದೇಶ ನೀಡಿದೆ.

ಈ ದಂಡದ ಮೊತ್ತವನ್ನು ಪರಿಹಾರವಾಗಿ ನೀಡುವುದರ ಜೊತೆಗೆ, ಸುಳ್ಳು ಪ್ರಕರಣದ ಹಾಕಿದ್ದಕ್ಕಾಗಿ ದೂರದರ್ಶನದಲ್ಲಿ ಹಾಗೂ ರಾಜ್ಯದ ಪ್ರಮುಖ ಇಂಗ್ಲಿಷ್ ಮತ್ತು ಕನ್ನಡ ದಿನಪತ್ರಿಕೆಯಲ್ಲಿ ಕ್ಷಮೆ ಕೋರಬೇಕು ಎಂದು 7 ದಿನಗಳ ಗಡುವು ನೀಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!