Ad imageAd image

ಕಾಶಪ್ಪ ಹೆಗ್ಗಣ್ಣಗೇರಾ MRPS ನೂತನ ರಾಜ್ಯ ಕಾರ್ಯದರ್ಶಿ

Bharath Vaibhav
ಕಾಶಪ್ಪ ಹೆಗ್ಗಣ್ಣಗೇರಾ MRPS ನೂತನ ರಾಜ್ಯ ಕಾರ್ಯದರ್ಶಿ
WhatsApp Group Join Now
Telegram Group Join Now

ಯಾದಗಿರಿ:  ಬೆಂಗಳೂರುನಲ್ಲಿ ಮಾದಿಗ ದಂಡೋರ MRPS ರಾಜ್ಯಾದ್ಯಕ್ಷ ಬಿ. ನರಸಪ್ಪ ದಂಡೋರ ರವರ ಆದೇಶ ಮೇರೆಗೆ | ಸಕ್ರೀಯ ಹೋರಾಟದ ಶ್ರಮಕ್ಕೆ ಫಲ ಕಾಶಪ್ಪ ಹೆಗ್ಗಣ್ಣಗೇರಾರನ್ನು ಸಮಿತಿ ನೂತನ ರಾಜ್ಯ ಕಾರ್ಯದರ್ಶಿಯಾಗಿ ನೇಮಿಸಿ ಪತ್ರಿಕೆ ಪ್ರಕಟಣೆ ತಿಳಿಸಿದ್ದಾರೆ.

ರಾಜ್ಯ ಅಧ್ಯಕ್ಷರ ನೀಡಿರುವ ಆದೇಶದಂತೆ ಕಾಶಪ್ಪ ಹೆಗ್ಗಣಗೇರಾ ಅವರು ಈ ಹಿಂದೆ ಯಾದಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಮೂರು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ನಾಯಕ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ ನಾಯಕತ್ವದಲ್ಲಿ ಸಮಿತಿ ಮಾರ್ಗದರ್ಶನ ಒಳ ಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ಶ್ರಮಿಸಿದ್ದರು.

ಯಾದಗಿರಿ ಜಿಲ್ಲೆಯಲ್ಲಿ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ಧ್ವನಿಯೆತ್ತಿ ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕತೆ ಹೋರಾಡಿದ್ದಾರೆ ಮತ್ತು ಅಳ ಮೀಸಲಾತಿ ವಿಷಯವಾಗಿ ಅರೆಬೆತ್ತಲೆ ದರಣಿ ಸಮಜದ ಕಟ್ಟಕಡೆಯ ಯಾವುದೇ ವ್ಯಕ್ತಿಗೂ ಅನ್ಯಾಯವಾಗಿದೆ ಎಂದು ತಿಳಿದ ತಕ್ಷಣವೇ ಸ್ಥಳಕ್ಕೆ ಭೇಟಿ ನಾವು ನಮ್ಮ ಸಂಘಟನೆ ನಿಮ್ಮ ಹಿಂದೆ ಇದ್ದೇವೆ ಎಂದು ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ ಇದನ್ನು ಗುರುತಿಸಿ ಬೆಂಗಳೂರು ನಲ್ಲಿ ದಿನಾಂಕ 20-06-2025 ರಂದು ಖಾಸಗಿ ಹೋಟೆಲ್ ಒಂದರಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು ಮತ್ತು ಮಾದಿಗ ದಂಡೋರ ರಾಜ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ಇವರನ್ನು ರಾಜ್ಯ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದರು

ಜಿಲ್ಲೆಯಲ್ಲಿ ಮತ್ತು ಅನೇಕ ತಾಲೂಕ ಮತ್ತು ಗ್ರಾಮಗಳಲ್ಲಿ ಸಂಘಟನೆ ಬಲಪಡಿಸಿ ಹಲವು ಹೋರಾಟ ನಡೆಸಿದ ಸಾಮಾಜಿಕ ಕಾಳಜಿ ಗುರುತಿಸಿ ಬಡವರ ಅರ್ಥವ್ಯವಸ್ಥೆಯ ತಿಳಿದು ಇಂತರವರನ್ನು ಗುರುತಿಸಿ ಸ್ಥಾನವನ್ನು ನೀಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ ಯಾದಗಿರಿ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳ ಮತ್ತು ವಿವಿಧ ತಾಲೂಕ ಅಧ್ಯಕ್ಷರು ಗಳು ಸಂಭ್ರಮ ಮತ್ತು ರಾಜ್ಯ ಅಧ್ಯಕ್ಷರಿಗೆ ಅಭಿನಂದನೆಗಳು ತಿಳಿಸಿದ್ದಾರೆ.

ವರದಿ: ರವಿ ಬುರನೊಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!