Ad imageAd image

ಕಟಬು-ಕಟಬರ್ ಸಮಾಜದ ಜನ ಜಾಗೃತಿ ಸಮಾವೇಶ ಪೂರ್ವಭಾವಿ ಸಭೆ

Bharath Vaibhav
ಕಟಬು-ಕಟಬರ್ ಸಮಾಜದ ಜನ ಜಾಗೃತಿ ಸಮಾವೇಶ ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಚಡಚಡಣ:-  ಕಟಬು-ಕಟಬರ್ ಸಮಾಜದ ಜನ ಜಾಗೃತಿ ಸಮಾವೇಶದ ಪೂರ್ವ ಭಾವಿ ಸಭೆ ಚಡಚಣ ದಲ್ಲಿ ಇಂದು ಸಭೆಯ ಅಧ್ಯಕ್ಷತೆ ವಹಿಸಿ ಸನ್ಮಾನ ಶಿವಮೂರ್ತಿ ಕಾಟಕರ್ ಜಿಲ್ಲಾ ಅಧ್ಯಕ್ಷರು ಸಪ್ಟಂಬರ, 1, 20024, ರಂದು ಬೃಹತ್ ಜಿಲ್ಲಾ ಸಮಾವೇಶ ಕಾರ್ಯಕ್ರಮದಲ್ಲಿ ನಡೆಯಲಿರುವ ಕಟಬು ಕಟಬರ ,ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರು 10 ತರಗತಿಯಲ್ಲಿ 80% ಗಿಂತ ಹೆಚ್ಚು ಅಂಕಗಳಿಸಿದವರು.

ಪಿಯುಸಿಯಲ್ಲಿ 80% ಹೆಚ್ಚು ಅಂಕ ಪಡೆದವರಿಗೆ ಸನ್ಮಾನ ಕಾರ್ಯಕ್ರಮ ಜರಗಲಿದ್ದು ಮತ್ತು ನಿವೃತ್ತ ಸೈನಿಕರಿಗೆ ಗೌರವಾನ್ವಿತ ಸನ್ಮಾನ ನೀಡಲಾಗಿದು , ಈ ಪೂರ್ವ ಸಭೆ ಉದ್ದೇಶ ಹೆಚ್ಚಿನ ಸಂಖ್ಯೆಯಲ್ಲಿ ಸಪ್ಟಂಬರ್ 1 ರಂದು ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕಟಬು ಕಟಬರ ಜನಾಂಗದ ಸದಸ್ಯರು ಪಾಲ್ಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಮಾತನಾಡಿದರು.

ರಾಜ್ಯ ಸಂಚಾಲಕರಾದ ವಿಲಾಸ ಶಿಂದೆ ಇವರು ಕೂಡ ಕಡಬು ಕಟಬರ ಜನಾಂಗದ ವೃತ್ತಿ ಏನು ಅಂತ ತಿಳಿಸಿಕೊಟ್ಟವರು, ಕಟಬು ಕಟಬra ಜನಾಂಗದ ಕಾಯಕ ಮೀನುಗಾರಿಕೆ, ತೊಗಲುಗೊಂಬೆ ಆಟ, ಹಣಚೆ ಬಟ್ಟು ಇನ್ನು ಮುಂತಾದ ಕಾಯಕದಲ್ಲಿ ತೊಡಗಿದ ಈ ಕಟಬು ಕಟಬರ ಜನಾಂಗದ ಜನರಿಗೆ ತುಂಬಾ ಅನ್ಯವಾಗುತ್ತಿದೆ ಕಾರಣ ಕೆಲವು ಕಡೆಯಲ್ಲಿ ಸಿಳ್ಳಿಕ್ಯಾತ ಎಸಿ ಜನಾಂಗದವರು, ಕಿಳ್ಳಿಖ್ಯಾತ ಎಸ್ಟಿ ಜನಾಂಗದವರು, ಕಟಬು ಅಲೆಮಾರಿ ಜನಾಂಗ ಎಂದು, ಕಟಬರ್ ಅನ್ನು ಜನಾಂಗ ಲೆಕ್ಕಕ್ಕಿಲ್ಲ ದಂತಾಗಿದೆ,ಈ ಎಲ್ಲಾ ಜಾತಿ ಜನರು ಒಂದೇ ಕಟಗೇರಿದವರಾದರು ಎಲ್ಲರಿಗೆ ಬೇರೆ ಬೇರೆ ಸವಲತ್ತುಗಳಿವೆ ಹೀಗಾಗಿ ಸರ್ಕಾರಿ ಅನುದಾನಗಳಿಗೆ ವಂಚಿತರಾಗಿದ್ದೇವೆ ಎಂದು ನುಡಿದರು.

ಜಿಲ್ಲಾ ಉಪಾಧ್ಯಕ್ಷರು ಮಹೇಶ ಶಿಂದೆ (ಚಡಚಣ) ಈ ಸಮಾವೇಶದ ಉದ್ದೇಶ ಕಡುಬು ಜನಾಂಗ ಅಲೆಮಾರಿ ಜನಾಂಗದವರು, ಕಟಬರ್ ಜನಾಂಗ ಓಬಿಸಿ ಅವರು ಈ ರೀತಿ ಸರ್ಕಾರ ಮೋಸ ಮಾಡ್ತಾ ಇದೆ, ಕಟಬು ಕಟಬರ ಒಂದೇ ಜನಾಂಗದವರು ಇವರೆಲ್ಲರೂ ಅಲೆಮಾರು ಜನಾಂಗದವರೇ ಈ ಕೂಗು ಸರ್ಕಾರಕ್ಕೆ ಮುಟ್ಟುವ ತನಕ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.ಭಾರತ ವೈಭವ ವರಿದಾಗರಾರು ಉಮಾಶಂಕರ ಕ್ಷತ್ರಿ ಸ್ವಾಗತಿಸಿದರು

ಈ ಸಂದರ್ಭದಲ್ಲಿ ಚಡಚಣ ತಾಲೂಕು ಅದ್ಯಕ್ಷರು ದತ್ತು ಶಿಂದೆ, ಪ್ರಧಾನ ಕಾರ್ಯದರ್ಶಿ ಸುಭಾಷ ಸಂಗಪ್ಪ ಶಿಂದೆ, ಕಾರ್ಯದರ್ಶಿ ರವಿ ಶಾಂತಪ್ಪ ಶಿಂದೆ, ಸಂಘಟನಾ ಕಾರ್ಯದರ್ಶಿಯಾಗಿ ರವಿ ಶ್ರೀಶೈಲ ಶಿಂಧೆ,ಕುಬೇರ ಶಿಂದೆ, ದಯಾನಂದ ಶಿಂದೆ, ಹಣಮಂತ ನಾಗಪ್ಪ ಕ್ಷೆತ್ರಿ,ಚಿದಾನಂದ ಶಿಂದೆ, ರಾಜು ಹಣಮಂತ ಕ್ಷತ್ರಿ,ಕಲಬುರಗಿ ಅದ್ಯಕ್ಷರು ಅರುಣ್ ಕಟ್ಟಿಮನಿ
ಹಾಗೂ ಸಿಂದಗಿ ಮತ್ತು ಆಲಮೇಲ ತಾಲೂಕಿನ ಅದ್ಯಕ್ಷರು ಸಂತೋಷ ಕ್ಷತ್ರಿ ಕಡಣಿ,ಇಂಡಿ ತಾಲ್ಲೂಕಿನ ಅದ್ಯಕ್ಷರು ಭೀಮ ಕ್ಷತ್ರಿ,ಹಣಮಂತ ಕ್ಷತ್ರಿ ಮಾಜಿ ಸೈನಿಕರು (ಶಿರಶ್ಯಾಡ),ಮತ್ತು ಉಪಸ್ಥಿತಿ ಕಾಶಿನಾಥ್ ಕ್ಷತ್ರಿ (ಮಡ್ನಳಿ) ಪ್ರಭಾಕರ್ ಕ್ಷತ್ರಿ (ಕಡಣಿ),ಮತ್ತು ಸಂಜೆವಾಣಿ ವರಿದಗಾರಾರು ಅಪ್ಪು ಶಿಂದೆ ಸಮಸ್ತ ಚಡಚಣ ಭಾಗದ ಹಿರಿಯರೂ ಯುವಕರು ಎಲ್ಲರೂ ಈ ಸಮಾವೇಶದಲ್ಲಿ ಉಪಸ್ಥಿತರಿದ್ದರು.

ವರದಿ:- ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!