ನಾಲ್ಕು ವರ್ಷಗಳ ಹಿಂದೆ ಅಂದರೆ 2021 ರಲ್ಲಿ ರಾಜಸ್ತಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ವಿಕಿ ಕೌಶಾಲ್ ದಂಪತಿ ಜೋಡಿ ಗಂಡು ಮಗುವನ್ನು ಇಂದು ಸ್ವಾಗತಿಸಿಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ಪೋಷಕರಾಗುವುದಾಗಿ ಹೇಳಿಕೊಂಡಿದ್ದ ಸೆಲೆಬ್ರೆಟಿ ಜೋಡಿ ಗಂಡು ಮಗುವಿಗೆ ಪಪ್ಪಾ, ಮಮ್ಮಿ ಆಗಿದ್ದಾರೆ. ಈ ಸುದ್ದಿಯನ್ನು ಅವರು ಸೋಸಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದು, ಹೊಸ ತಂದೆ, ತಾಯಿಗಳನ್ನು ಅವರ ಸ್ನೇಹಿತರು ಅಭಿನಂದಿಸುವ ಮೂಲಕ ಕತ್ರಿನಾ, ವಿಕಿ ಸಂತಸದಲ್ಲಿ ಪಾಲ್ಗೊಂಡಿದ್ದಾರೆ. 42 ನೇ ವಯಸ್ಸಿಗೆ ತಾಯಿ: ಈ ಮೂಲಕ ಕತ್ರಿನಾ ಕೈಫ್ ತಮ್ಮ 42 ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ.




