ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಮಾದಿಗ ಸಮಾಜದ ಹಿರಿಯ ಮುಖಂಡರಾದ ಶ್ರೀ.ಗೋಪಾಲರಾವ ಕಟ್ಟಿಮನಿಯವರು ಪತ್ರಿಕಾಗೋಷ್ಠಿ ಮಾಡಿ ತಮ್ಮ ಸಮಾಜಕ್ಕೆ ಮನವಿ ಮಾಡಿ ಹೇಳಿದರು.
ದಿನಾಂಕ 6 -4-2025 ರಂದು ಒಳ ಮೀಸಲಾತಿ ಜಾರಿಗೆ ಕುರಿತು ಕರ್ನಾಟಕ ಸರ್ಕಾರ ಜಾತಿಗಣತಿಯನ್ನು ಆರಂಭ ಮಾಡಿದೆ ಅದರ ಪ್ರಯುಕ್ತ ಎಲ್ಲಾ ನನ್ನ ಕುಲಬಾಂಧವರು ಜಾತಿ ಕಾಲಮಿನಲ್ಲಿ ಮಾದಿಗ ಎಂದು ಬರೆಸಬೇಕು ಅಧಿಕಾರಿಗಳು ತಮ್ಮ ಮನೆಯ ಬಾಗಿಲಿಗೆ ಬಂದಾಗ ಯಾವುದೇ ರೀತಿಯಿಂದ ಭಯ ಪಡೆದನೆ ನಿರ್ದಿಷ್ಟವಾಗಿ ಮಾದಿಗ ಸಮುದಾಯದವರೆಂದು ಜಾತಿ ಕಾಲಮಿನಲ್ಲಿ ಬರಿಸಿದ ನಂತರ ಕುಟುಂಬದಲ್ಲಿ ಎಷ್ಟು ಸದಸ್ಯರ ಇರುತ್ತಾರೆ. ಎಲ್ಲಾ ಸದಸ್ಯರ ಬರಸಬೇಕೆಂದು ಪತ್ರಿಕಾಗೋಷ್ಠಿ ಮೂಲಕ ಸಮಾಜದ ಹಿರಿಯ ಮುಖಂಡರಾದ ಗೋಪಾಲರಾವ ಕಟ್ಟಿಮನಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನರಸಪ್ಪ ಕಿಡುನೂರ್.ಸುನೀಲ್ ಸಲಗರ. ವಿಜಯರಾಜ್ ಕೊರಡಂಪಳ್ಳಿ.ಮಲ್ಲು ಕೊಡಂಬುಲ್.ಅನಿಲ ಕ್ರಾಂತಿಯ. ಶಿವರಾಜ.ಮುಂತಾದವರು ಉಪಸ್ಥಿತಿ ಇದ್ದರೂ
ವರದಿ :ಸುನಿಲ್ ಸಲಗರ