ಬೆಂಗಳೂರು : ಸಮೀಪದ ಮಹಾಲಕ್ಷ್ಮೀ ಲೇಔಟ್ ಬಸ್ ನಿಲ್ದಾಣದಲ್ಲಿ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾ ಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಬಿ.ಅವರ ನೇತೃತ್ವದಲ್ಲಿ ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 6ನೇ ವರ್ಷದ ಸಂಸ್ಕರಣೋತ್ಸವ ಮತ್ತು ದಾಸೋಹ ದಿನ ಅಚರಣೆ.
ಡಾ.ಶಿವಕುಮಾರ ಮಹಾಸ್ವಾಮೀಜಿರವರ ಭಾವಚಿತ್ರಕ್ಕೆ ಮಾಜಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಯ್ಯ, ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ಸುಪುತ್ರ ಹಾಗೂ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್, ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು.

ಶಾಸಕ ಗೋಪಾಲಯ್ಯ ಕಾಯಕವೇ ಕೈಲಾಸ ತತ್ವದ ಪ್ರತಿರೂಪ,ಮಹಾನ್ ಮಾನವೀಯತೆ ಗುಣವುಳ್ಳ ಶಿವಕುಮಾರ ಮಹಾಸ್ವಾಮೀಜಿಗಳು.
ಅನ್ನ ,ಶಿಕ್ಷಣ, ಆಶ್ರಯದ ಮಹತ್ವಗಳನ್ನು ಸಾರಿದರು, ಲೋಕ ಕಲ್ಯಾಣಕ್ಕಾಗಿ ಅವರ ಜೀವನವನ್ನು ಮುಡಿಪಾಗಿಟ್ಟರು.
ಶಾಂತಿಯುತೆ, ಸೌರ್ಹದತೆ, ಸಹೋದರತ್ವ ಮತ್ತು ಜೀವನ ಹೇಗೆ ಸಾಗಿಸಬೇಕು ಎಂದು ನಾಡಿನ ಜನತೆಗೆ ಅರಿವು ಮೂಡಿಸಿದ ಮಹಾನ್ ಸಂತ, ನಡೆದಾಡುವ ದೇವರು ಶಿವಕುಮಾರಸ್ವಾಮೀಜಿಗಳ ಆದರ್ಶಗುಣಗಳನ್ನು ಆಳವಡಿಸಿಕೊಂಡು ಎಲ್ಲರು ಜೀವನ ಸಾಗಿಸಿದರೆ ಎಂದರು ನಂತರ ಅನ್ನ ನಿಯೋಗಕ್ಕೆ ಚಾಲನೆ ನೀಡಿ ಶಾಸಕ ಗೋಪಾಲಯ್ಯ ಮಾತನಾಡಿದರು.
ಮಹಿಮಾ ಪಟೇಲ್ ಮಾತನಾಡಿ ಕನ್ನಡ ನಾಡಿನ ಮುಖವಾಣಿಯಂತೆ ಬದುಕಿದವರು ಅವರ ಸಾಧನೆ ಸಂಯಮ ನಾಡಿಗೆ ಮಾದರಿಯಾಗಿತ್ತು. ನಾಡಿನಲ್ಲಿ ಮಠಮಾನ್ಯಗಳು ಮೊದಲಿನಿಂದಲೂ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಅನ್ನ, ಶಿಕ್ಷಣ, ಆಶ್ರಯ, ಅಚಾರ, ವಿಚಾರ ಸಿದ್ದಾಂತಗಳು ಮೂಲಕ ವಿಶ್ವದ ಗಮನ ಸೆಳದ ಡಾ.ಶಿವಕುಮಾರ ಮಹಾಸ್ವಾಮೀಜಿರವರ ಆದರ್ಶ ತತ್ವಗಳಿಂದ ಶಾಂತಿ ಲಭಿಸಲಿ.
ಡಾ.ಶಿವಕುಮಾರ ಮಹಾಸ್ವಾಮೀಜಿ ಸಾಧನೆ ಮಾಡಿ ಮಹಾನ್ ಸಂತರಾಗಿ ಪರಮಾತ್ಮ ಬಳಿ ಲೀನವಾದರು ಶಿವಕುಮಾರ ಸ್ವಾಮೀಜಿರವರು ಸಮಾಜಕ್ಕೆ ಕೊಟ್ಟ ಕೊಡುಗೆ ಸದಾ ನಾವು ಸ್ಮರಿಸಬೇಕು, ಎಲ್ಲರಿಗೂ ಮೀರಿದ ಕಾರ್ಯ ಮಾಡಿದ ಮಹಾ ತಪಸ್ವಿ ಸ್ವಾಮೀಜಿಗಳು ಮಹಿಮಾ ಪಟೇಲ್ ಅವರು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು ಎಂದರು ಇದೇ ವೇಳೆ ಈ ಸ್ವಾಮಿಜಿ ಅವರ ಪುಣ್ಯ ಸ್ಮರಣೋತ್ಸವ ದಾಸೋಹ ದಿನಾಚರಣೆ ನಡೆಸಿಕೊಟ್ಟ ಮೋಹನ್ ಕುಮಾರ್ ಅವರ ಸಂಗಡಿಗರಿಗೆ ಶುಭ ಕೋರಿದರು.
ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಬಿ. ಸರ್ವರಿಗೂ ಸ್ವಾಗತಿಸಿ ಗಣ್ಯರಿಗೆ ಡಾ. ಶ್ರೀಗಳ ಪೊಟ್ಟು ನೀಡಿ ಗೌರವಿಸಿದರು.
ನಮ್ಮ ಕನ್ನಡಿಗರ ವಿಜಯ ಸೇನೆ ರಾಜ್ಯಾಧ್ಯಕ್ಷ ವಿಜಯಕುಮಾರ್ ಮಾತನಾಡಿ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರು ಸಮಾಜಕ್ಕೆ ಅನ್ನ,ಅಕ್ಷರ, ಆಶ್ರಯವನ್ನು ಕೊಟ್ಯಂತರ ಜನರಿಗೆ ನೀಡಿದರು, ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದವರು ಇಂದು ದೇಶ, ವಿದೇಶದಲ್ಲಿ ಉತ್ತಮ,ಉನ್ನತ ಕೆಲಸದಲ್ಲಿ ಇದ್ದಾರೆ. ಉತ್ತಮ ಸಮಾಜಕ್ಕೆ ಬದುಕು ಕಲ್ಯಾಣವಾಗಲು ಶಿವಕುಮಾರ ಸ್ವಾಮೀಜಿ ಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಕೆಂಪಣ್ಣ, ಪ್ರವೀಣ್ ಭಜರಂಗಿ, ರಂಜಿತ್, ಆಟೋ ನಾಗರಾಜ್, ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಸದಸ್ಯರು ಮಹಾಲಕ್ಷ್ಮೀ ಲೇಔಟಿನ ಸಮಸ್ತ ನಾಗರಿಕರು ಮಹಿಳೆಯರು ಭಕ್ತಾದಿಗಳು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




