ಗುರುಮಠಕಲ್ : ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಅಮಾನವೀಯ ಜಾತಿ ದ್ವೇಷದ ಘಟನೆ ನಡೆದಿದೆ. ಮಾದಿಗ ಸಮುದಾಯದ ಹಿಂದುಳಿದ ದಲಿತ ಯುವಕನು ತನ್ನ ಶ್ರಮದಿಂದ ಓದಿ ವಕೀಲ ವೃತ್ತಿಯಲ್ಲಿ ಸ್ಥಿರವಾಗುತ್ತಿರುವ ಸಂದರ್ಭದಲ್ಲಿಯೇ, ಮೇಲ್ಜಾತಿಯ ಕೆಲವರು ಆತನಿಗೆ ಜಾತಿ ನಿಂದನೆ ಮಾಡಿ, “ನೀನು ಏನು ಮಾಡುತ್ತೀಯ, ನೀನು ಮಾದಿಗ, ಸೂಳೆಮನೆಯವ” ಎಂದು ಕೀಳಾಗಿ ಮಾತಾಡಿದ್ದಾರೆ.
ಯುವಕನು ಸುರುಪುರ ಠಾಣೆಯಲ್ಲಿ ಕೊಡಲೇ ಸ್ಥಳಕ್ಕೆ ಬೇಟಿ ಕೊಟ್ಟು ಮಾದಿಗ ದಂಡೋರ ಸುರುಪುರು ಅಧ್ಯಕ್ಷರು ಆರೋಪಿಗಳನ್ನು ಬಂದಿಸಬೇಕಿತ್ತು ಎಂದು FIR ದಾಖಲಿಸಿದ್ದಾರೆ ಅದರು. ಪೊಲೀಸರಿಂದ ವಿಳಂಬವಾಗಿದೆ. ಅದೇ ರಾತ್ರಿಯಲ್ಲಿ ದುರುಗಪ್ಪ ತಂದೆ ಬಸಪ್ಪ ದೊಡ್ಡಮನಿ ಮನೆಗೆ ದಾಳಿ ಮಾಡಿ, ಹಲ್ಲೆ ಮಾಡಿ, ಜೀವ ಬೆದರಿಕೆಯೊಡ್ಡಿದ ಘಟನೆ ನಡೆಯುವುದು ನಮ್ಮ ಸಮಾಜದ ಕೊಡುಗೆಯಿಲ್ಲದ ಅಸಹ್ಯ ಚಿತ್ರಣ. ವಾಗಿದೆ ಎಂದು ಮಾತನಾಡಿದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷರಾದ ಕೆ.ಬಿ. ವಾಸುಜಾತಿ ಆಧಾರಿತ ದೌರ್ಜನ್ಯಗಳು ಹತ್ತಿಕ್ಕಲ್ಪಡಬೇಕು. ನಮ್ಮ ಸಮಾಜದ ಶೋಷಿತ ದಲಿತ ಸಮುದಾಯದ ಮೇಲಿನ ದೌರ್ಜನ್ಯಗಳನ್ನು ಕರ್ನಾಟಕ ಸರ್ಕಾರ ತಕ್ಷಣ ಗಂಭೀರವಾಗಿ ಪರಿಗಣಿಸಬೇಕು.
ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು, ಪೀಡಿತ ಯುವಕ ಮತ್ತು ಅವನ ಕುಟುಂಬಕ್ಕೆ ಶಾಶ್ವತ ಪೊಲೀಸ್ ರಕ್ಷಣೆ ಒದಗಿಸಬೇಕು.
ಈ ಪ್ರಕರಣವನ್ನು ಮಾನವ ಹಕ್ಕು ಉಲ್ಲಂಘನೆಯ ತೀವ್ರ ಪ್ರಕರಣವಾಗಿ ಪರಿಗಣಿಸಿ, ಶೀಘ್ರ ನ್ಯಾಯ ಒದಗಿಸಬೇಕು.
ಜಾತಿ ಭ್ರಾಂತಿಯ ವಿರುದ್ಧ ರಾಜ್ಯಾದ್ಯಂತ ಶಕ್ತಿಶಾಲಿ ಜಾಗೃತಿ ಅಭಿಯಾನ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
ಅವರು ಮುಂದುವರೆದು, “ನ್ಯಾಯ ತಡವಾದರೆ ಅದು ಇನ್ನೊಂದು ಅನ್ಯಾಯವಾಗುತ್ತದೆ. ಕರ್ನಾಟಕ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಜಾತಿ ಮೇಲೆ ನಡೆಯುವ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಇದ್ದೇ ಇರುತ್ತದೆ” ಎಂದು ಎಚ್ಚರಿಸಿದ್ದಾರೆ.
ಇಂತಹ ಜಾತಿ ಆಧಾರಿತ ಹಲ್ಲೆ ಹಾಗೂ ಮಾನವೀಯ ಅಪಮಾನಗಳನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ, ಸರ್ಕಾರದ, ಸಮಾಜದ ಜವಾಬ್ದಾರಿ.
ಈ ಬಗ್ಗೆ ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕಠಿಣವಾಗಿ ಆಗ್ರಹಿಸಿದ್ದಾರೆ.
ವರದಿ : ರವಿ ಬುರನೋಳ




