ಚಡಚಣ : ಚಡಚಣ ಪಟ್ಟಣಕ್ಕೆ ಏತ ನಿರಾವರಿ ಯೋಜನೆಯ ಅಡಿ ಹಾಕಲಾದ ಕೊಳವೆಯ ನಕ್ಷೆಯನ್ನು ಸಮೀಪದ ಹಾಲಹಳ್ಳಿ ಗ್ರಾಮದ ಹೊಲ ಒಂದರಲ್ಲಿ ಕೆಬಿಜೆಎನ್‌ಎಲ್ ಎಂ.ಡಿ ಮೋಹನರಾಜ ಬುಧವಾರ ವೀಕ್ಷಣೆ ಮಾಡಿದರು.ಶಾಸಕ ವಿಠ್ಠಲ ಕಟಕಧೋಂಡ ಇದ್ದರು.
ಚಡಚಣ ಏತ ನಿರಾವರಿ ಯೋಜನೆ ಅವ್ಯವಹಾರ: ಬೆಚ್ಚಿ ಬಿದ್ದ ಕೆಬಿಜೆಎನ್‌ಎಲ್ ಎಂ.ಡಿ ಮೋಹನಲಾಲ್
ಚಡಚಣ: ಸುಮಾರು 8 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಮಾರು 480 ಕೋಟಿ ಅನುದಾನದಲ್ಲಿ ಕೈಗೊಳ್ಳಲಾದ ಚಡಚಣ ಏತ ನಿರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣ ಲಪಟಾಯಿಸಿದ್ದಾರೆ ಎಂಬ ಶಾಸಕ ವಿಠ್ಠಲ ಕಟಕಧೋಂಡ ಅವರ ಆಪಾದನೆಯ ಮೇರೆಗೆ ಬುಧವಾರ ಕೆಬಿಜೆಎನೆಲ್ ಅಧಿಕಾರಿ ಯೋಜನೆ ಕೈಗೊಳ್ಳಲಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧೂಳಖೇಡ ಗ್ರಾಮದ ಭೀಮಾ ನದಿಯಿಂದ ಸಂಖ ಗ್ರಾಮದ ಯೋಜನೆಯ ನೀರೆತ್ತುವ ಸ್ಥಳವೂ ಸೇರಿದಂತೆ ಮಣಂಕಲಗಿ,ಉಮರಾಣಿ ಹಾಲಳ್ಳಿ ಮುಂತಾದ ಗ್ರಾಮಗಳ ಹೊಲ ಗದ್ದೆಗಳಿಗೆ ಭೇಟಿ ನೀಡಿದ ಅವರು, ಯೋಜನೆಯ ಅವ್ಯವಸ್ಥೆ ಕಂಡು ಬೆಚ್ಚಿ ಬೀಳುವಂತಾಯಿತು.ಹೊಳೆ ಸಂಖ ಗ್ರಾಮದ ಹತ್ತಿರದ ಭೀಮಾ ನದಿಯಲ್ಲಿನ ಜಾಕ್ ವೆಲ್ ಮೂಲಕ ಹೊಲಗಳಿಗೆ ನೀರು ಪುರೈಕೆ ಮಾಡುವ ಕೊಳವೆ ಮಾರ್ಗದಲ್ಲಿ ಹಲವಾರು ಮಾರ್ಗ ಮಧ್ಯದಲ್ಲಿ ಕೊಳವೆಗಳನ್ನೆ ಅಳವಡಿಸಿಲ್ಲಿ.
ರೈತರ ಜಮೀನಿನಲ್ಲಿ ಅಲ್ಲೊಂದು,ಇಲ್ಲೊಂದು ಕೊಳವೆಗಳನ್ನು ಅಳವಡಿಸಿ ಅವುಗಳ ಮಧ್ಯೆ ಸಂಪರ್ಕವೇ ಕಲ್ಪಿಸಿಲ್ಲದಿರುವದನ್ನು ಎಂ.ಡಿ ಪರಿಶೀಲಿಸಿ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದರು.ಯೋಜನೆಯ ಮಾರ್ಗಮಧ್ಯದ ಕೊಳವೆಯಲ್ಲಿ ಸುಮಾರು 620 ಔಟ್‌ಲೆಟ್‌ಗಳನ್ನು ಅಳವಡಿಸಲಾಗಿದೆ.ಆದರೆ ಅದರಲ್ಲಿ ಕೇವಲ 100 ರಿಂದ 150 ರಲ್ಲಿ ಮಾತ್ರ ನೀರು ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.ಇದೆ ಸಂದರ್ಭದಲ್ಲಿ ಹಲವಾರು ರೈತರು ಯೋಜನೆ ಕುರಿತು ಎಂ.ಡಿ ಅವರಿಗೆ ದೂರೂ ಸಲ್ಲಿಸಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುವಂತೆ ಆಗ್ರಹಿಸಿದರು.
ನಂತರ ಚಡಚಣದ ಪ್ರವಾಶಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕೆಬಿಜೆಎನ್‌ಎಲ್ ಎಂ.ಡಿ ಮೋಹನರಾಜ,ಶಾಸಕ ವಿಠ್ಠಲ ಕಟಕಧೋಂಡ ಅವರ ಒತ್ತಾಯದ ಮೇರೆಗೆ ನಿನ್ನೆ ಹಾಗೂ ಇಂದು ಇಂಡಿ ಹಾಗೂ ಚಡಚಣ ತಾಲ್ಲೂಕಿನಲ್ಲಿ ಸಂಚಾರ ಮಾಡಿದ್ದೇನೆ. ಕೃಷಾ ಕಾಲುವೆಯಯಲ್ಲಿ ಟೇಲ್ ಎಂಡ ವರೆಗೂ ನೀರು ಹರಿಯದಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ.ಕೆರೆ ತುಂಬಿಸುವ ಯೋಜನೆಯಲ್ಲಿನ ನ್ಯೂನ್ಯತೆಗಳನ್ನು ಪರಿಶೀಲಿಸಿದ್ದೇನೆ.ಚಡಚಣ ಏತ ನಿರಾವರಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ.ಸುಮಾರು 6 ತಿಂಗಳೊಳಗೆ ಈ ಯೋಜನೆಯ ಸಂಪೂರ್ಣ ಅನುಷ್ಠಾನಗೊಳಿಸಲು ಪ್ರಮಾಣಿಕ ಪ್ರಯತ್ನಿಸಿ,ಈ ಯೋಜನೆಯ ಮೂಲಕ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಯುವಂತೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯುಕೆಪಿ ಮುಖ್ಯ ಎಂಜನೀಯರ್ ಎಚ್.ರವಿಶಂಕರ,ಅಧೀಕ್ಷಕ ಎಂಜನೀಯರ್ ಮನೋಜಕುಮಾರ ಗೊಡಬಳ್ಳಿ ಸೇರಿದಂತೆ ಕಾರ್ಯ ನಿರ್ವಾಹಕ ಇಂಜನೀಯರ್‌ಗಳು ಇದ್ದರು.
ಕೋಟ್; ಸುಮಾರು 8 ವರ್ಷಗಳಹಿಂದೆ ಕೈಗೊಳ್ಳಲಾದ ಚಡಚಣ ಏತ ನಿರಾವರಿ ಯೋಜನೆಯ ಅನುಷ್ಠಾನಗೊಳಿಸದೇ,ಸರ್ಕಾರದ ಮಟ್ಟದಲ್ಲಿ ಕಾಮಗಾರಿ ಪೂರ್ಣಗೊಂಡ ಬಗ್ಗೆ ಮಾಹಿತಿ ನೀಡಲಾಗಿದೆ.ಈ ಬಗ್ಗೆ ಕೆಬಿಜೆಎನ್‌ಎಲ್ ಎಂ.ಡಿ ಅವರಿಗೆ ಖುದ್ದು ಪರಿಶೀಲನೆ ನಡೆಸಿ ಶಿಘ್ರದಲ್ಲಿ ಯೋಜನೆಯ ಅನುಷ್ಠಾನಗೊಳಿಸಲು ತಿಳಿಸಿದ್ದೇನೆ.
ವರದಿ : ಉಮಾಶಂಕರ ಕ್ಷತ್ರಿ




