ರಾಯಚೂರು: ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬರುವ ಮಾನವಿ ತಾಲೂಕು ಮಟ್ಟದ 20 ಇಲಾಖೆ ಅಧಿಕಾರಿಗಳೊಂದಿಗೆ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ
1) ಅರೋಲಿ ಗ್ರಾಮದಲ್ಲಿ ಕುಡಿಯುವ ನೀರಿನ ಬಗ್ಗೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಾಡಿರುವ ಕುಡಿಯುವ ನೀರಿನ ಬಗ್ಗೆ ಸರಿಯಾಗಿ ತಲುಪಿಸಬೇಕೆಂದು ತಿಳಿಸಿದರು.
2) ಹಾರ್ನೆಲ್ಲಿ ಗ್ರಾಮದಲ್ಲಿ ಜೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಕಂಬಗಳನ್ನು ವರ್ಗಾವಣೆ ಮಾಡಲು ಜೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
3) ಅರಣ್ಯ ಇಲಾಖೆ ಅಧಿಕಾರಿಗಳಿಗೆ ರಾಯಚೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬರುವ ಮಾನ್ವಿ ಭಾಗದಲ್ಲಿ ಈಗಾಗಲೇ 23 ಸಾವಿರ ಗಿಡಗಳಿದ್ದು ಅವುಗಳಿಗೆ ಬೇಸಿಗೆಕಾಲದಲ್ಲಿ ನೀರಿನ ವ್ಯವಸ್ಥೆ ಕಾಪಾಡಿಕೊಳ್ಳಬೇಕೆಂದು ಅರಣ್ಯ ಅಧಿಕಾರಿಗಳಿಗೆ ಎಚ್ಚರಿಸಿದರು.
ರಾಜಳ್ಳಿ ಗ್ರಾಮದಿಂದ ಬಯಲ್ ಮರ್ಚೆಡ್ ರಸ್ತೆಗೆ 15 ಕಿ.ಮೀ ಗಿಡಗಳು ಹಾಕುತ್ತೇವೆ ಅಧಿಕಾರಿಗಳು ಶಾಸಕರಿಗೆ ತಿಳಿಸಿದರು.
5 )ಆರ್ ಡಿ ಎಸ್ ಕೆನಾಲ್ ಅಧಿಕಾರಿಗಳಿಗೆ ಕಾಲುವೆಗೆ ಇರುವ ಗೇಟ್ ಗಳನ್ನು ಅಭಿವೃದ್ಧಿಪಡಿಸಲು ಮತ್ತು ರೈತರಿಗೆ ಸೂಕ್ತ ಅನುಕೂಲವಾಗುವಂತೆ ಮಾಡಿಕೊಡಲು ತಿಳಿಸಿದರು.
6) ಕುರುಡಿ ಗಣೇಶ್ ಕ್ಯಾಂಪ್ ನಲ್ಲಿ 80 ಲಕ್ಷ ಕುಡಿಯುವ ನೀರು ಕಾಮಗಾರಿ ಬಗ್ಗೆ ವಿಚಾರಣೆ ನಡೆಸಲಾಯಿತು ಮತ್ತು ಗುತ್ತಿಗೆದಾರರು ಯಾರಾದರೂ ರೈತರ ಕೆರೆಗಳಿಗೆ ಪೈಪ್ ಲೈನ್ ಅಳವಡಿಕೆ ಮಾಡಿದರೆ ತಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಖಡಕ್ ಎಚ್ಚರಿಕೆ ನೀಡಿದರು.
7) ಕುರಡಿ ಕುರುಬರ ಓಣಿಯಲ್ಲಿ 75000 ಲೀಟರ್ ಟ್ಯಾಂಕ್ ನಿರ್ಮಾಣ ಮಾಡಲು ಯಾಕೆ ಮಾಡಿಲ್ಲವೆಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು 15ನೇ ಹಣಕಾಸಿನಲ್ಲಿ ಬಂದಿರುವ ಹಣದ ಬಗ್ಗೆ ಕುಡಿಯುವ ನೀರಿಗೆ ಖರ್ಚು ಮಾಡಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರಾಯಚೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ಮಾನ್ವಿ ತಾಲೂಕ ಮಟ್ಟದ ಕೆಡಿಪಿ ಸಭೆಯಲ್ಲಿ ಎಲ್ಲಾ ಅಧಿಕಾರಿಗಳಿಗೆ ಕಾಮಗಾರಿಗಳ ಬಗ್ಗೆ ನಿಗವಹಿಸುವಂತೆ ಎಚ್ಚರಿಕೆ ನೀಡಿದ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್
ಈ ಸಂದರ್ಭದಲ್ಲಿ ಮಾನ್ವಿ ತಾಹಶಿಲ್ದಾರರು ತಾಲೂಕ ಪಂಚಾಯತಿ ಇ ಓ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಾಲೂಕ ಮಟ್ಟದ ಕೆ ಡಿ ಪಿ ಅಧಿಕಾರಿಗಳುಮತ್ತು ಕೆಡಿಪಿ ಸದಸ್ಯರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ