ಬೆಂಗಳೂರು:- ಪೀಣ್ಯ,ದಾಸರಹಳ್ಳಿ ‘ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಾವೆಲ್ಲರೂ ಪುಣ್ಯವಂತರು. ಅಂದು ಕೆಂಪೇಗೌಡರು ಅನೇಕ ಪೇಟೆಗಳನ್ನು ಕಟ್ಟಿ ಜಾತಿಗಳ ಬೇಧ ಬಾವ ಮಾಡುತ್ತಿರಲಿಲ್ಲಾ ಎಂದು ಮಾಜಿ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಅವರ ಪತಿ ಜೆಡಿಎಸ್ ಮುಖಂಡ ನರಸಿಂಹಮೂರ್ತಿ (ಸಿಂಹ) ಹೇಳಿದರು.
ಅವರ ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಚೆನ್ನಕೇಶವ, ಅಧ್ಯಕ್ಷ ನರಸಿಂಹಮೂರ್ತಿ ಎಂ.ಎನ್(ಮಂಗಳ ವಾಟರ್), ಕಾರ್ಯದರ್ಶಿ ನಾಗರಾಜಪ್ಪ, ಉಪಾಧ್ಯಕ್ಷ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಜಂಟಿ ಕಾರ್ಯದರ್ಶಿ ಶಾಂತರಾಜು,ಸಹ ಕಾರ್ಯದರ್ಶಿ ಸತ್ಯನಾರಾಯಣ್, ಕಾರ್ಯದರ್ಶಿ ಅಶೋಕ್ ಬಾಬು, ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಗೌಡ, ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜು,ವಿಠಲ್ ಬಿರಾದಾರ್, ಖಜಾಂಚಿಗಳಾದ ಶ್ರೀನಿವಾಸ್, ಮಂಜುನಾಥ್ ಗೌಡ, ಕಾನೂನು ಸಲಹೆಗಾರ ಮಹಾದೇವಯ್ಯ, ಸಂಚಾಲಕರಾದ ಚಂದ್ರಶೇಖರ್,ರುದ್ರಯ್ಯ, ಮಧುಕರ್, ಕುಮಾರ್,ಕಾಳಪ್ಪ, ಜನಾರ್ದನ್, ರಾಮೇಗೌಡ, ಶಿವಕುಮಾರ್, ಲಕ್ಷ್ಮಿದೇವಿ ಸೇರಿದಂತೆ ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಕೆಂಪೇಗೌಡರ ಜಯಂತೋತ್ಸವ ನಿಮಿತ್ತ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೆಂಗಳೂರಿಗರ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಮಾಗಡಿಯಿಂದ ಬಿಬಿಎಂಪಿಯವರೆಗೆ ಕೆಂಪೇಗೌಡರ ಜ್ಯೋತಿ ತರುವ ಕಾರ್ಯದಲ್ಲಿ ಜ್ಯೋತಿ ಹಿಡಿದು ತಂದಿದ್ದು ನನ್ನ ಜೀವನದ ಅವಿಸ್ಮರಣೀಯ ದಿನ ಎಂದರೆ ತಪ್ಪಾಗಲಾರದು’, ಎಂದು ರಾಜಗೋಪಾಲನಗರ ವಾರ್ಡ್ ಜೆಡಿಎಸ್ ಮುಖಂಡನರಸಿಂಹಮೂರ್ತಿ(ಸಿಂಹ) ಮಾತನಾಡಿದರು.
ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ವಾರ್ಡ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಎಂ.ಎನ್ (ಮಂಗಳ ವಾಟರ್), ‘ಪದ್ಮಾವತಿ ನರಸಿಂಹಮೂರ್ತಿ ಅವರು ಉಪ ಮೇಯರ್ ಆಗಿದ್ದಾಗ ನಮ್ಮ ಸಂಘದ ಕಟ್ಟಡ ನಿರ್ಮಾಣಕ್ಕೆ ನರಸಿಂಹಮೂರ್ತಿ(ಸಿಂಹ) ರವರು ಹೆಚ್ಚಿನ ಸಹಕಾರ ನೀಡಿದ್ದಾರೆ. ಅವರ ಕೊಡುಗೆಯನ್ನು ನಾವು ಸದಾ ಸ್ಮರಿಸುತ್ತೇವೆ. ಹಾಗೆಯೇ ಸಂಘದ ಕಛೇರಿ ಮಾಡಿ ಅಲ್ಲಿಯೇ ಕೆಂಪೇಗೌಡರ ಪ್ರತಿಮೆ ಮಾಡಿದ ಹೆಗ್ಗಳಿಕೆ ನಮ್ಮ ಸಂಘಕ್ಕೆ ಸಲ್ಲುತ್ತದೆ. ನಮ್ಮ ಸಂಘವು ಬಡಾವಣೆಯ ಜನರ ಹಿತ ಕಾಪಾಡಲು ಹಾಗೂ ಕುಂದುಕೊರತೆಯನ್ನು ನೀಗಿಸಲು ಕಾಯಲು ಬದ್ಧವಾಗಿದೆ. ನಮ್ಮ ಸಂಘದ ಪದಾಧಿಕಾರಿಗಳ ನಿರ್ಧಾರದಂತೆ ಯಾರೂ ಕೂಡಾ ಕಾರ್ಖಾನೆಗೆ ಬಾಡಿಗೆ ಕೊಡಬಾರದು’, ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕೆಂಪೇಗೌಡ ಬಡಾವಣೆಯ ಸಮಸ್ತ ನಾಗರಿಕ ಬಂಧು ಭಗನಿಯರು ಮುಂತಾದವರು ಉಪಸ್ಥಿತರಿದ್ದರು.
ವರದಿ:-ಅಯ್ಯಣ್ಣ ಮಾಸ್ಟರ್