Ad imageAd image

ಸರ್ವ ಜನಾಂಗದ ನಾಯಕ ಕೆಂಪೇಗೌಡರು : ತಹಸೀಲ್ದಾರ್ ಶ್ರೀನಿವಾಸಲು ನಾಯುಡು

Bharath Vaibhav
ಸರ್ವ ಜನಾಂಗದ ನಾಯಕ ಕೆಂಪೇಗೌಡರು : ತಹಸೀಲ್ದಾರ್ ಶ್ರೀನಿವಾಸಲು ನಾಯುಡು
WhatsApp Group Join Now
Telegram Group Join Now

ರಾಷ್ಟ್ರಕವಿ ಕುವೆಂಪು ಆಶಯದ ಸರ್ವ ಜನಾಂಗದ ಶಾಂತಿಯ ತೋಟದ ಪರಿಕಲ್ಪನೆಯ ಸಮಾಜವನ್ನು 500 ವರ್ಷಗಳ ಹಿಂದೆಯೇ ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇ ಗೌಡರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ್ ಶ್ರೀನಿವಾಸಲು ನಾಯುಡು ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಆಯೋಜಿಸಿದ್ದ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸರ್ವ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ನಗರ ನಿರ್ಮಿಸಿದ ಕೆಂಪೇಗೌಡರು ಜನಪರ ಆಡಳಿತಕ್ಕೆ ಮಾದರಿ ಎಂದರು.

ಉಪತಹಸೀಲ್ದಾರ್ ಸತೀಶ್ ಮಾತನಾಡಿ ವಿಜಯನಗರ ಅರಸರ ಸಾಮಂತರಾಗಿದ್ದರೂ ಸ್ವತಂತ್ರವಾಗಿ ಜನಪರವಾಗಿ ಯೋಜಿಸಿದ್ದ ಕೆಂಪೇಗೌಡರ ಪೂರ್ವಜರು ಮೂಲತಃ ತಮಿಳುನಾಡಿನ ಕಂಚಿ ಭಾಗದಿಂದ ಕರ್ನಾಟಕಕ್ಕೆ ಬಂದು ಸುಮಾರು 350 ವರ್ಷಗಳ ಕಾಲ ಮಾಗಡಿ ಹಾಗೂ ಯಲಹಂಕ ಪ್ರಾಂತ್ಯವನ್ನು ದಕ್ಷತೆಯಿಂದ ಆಳ್ವಿಕೆ ನಡೆಸಿದರು ಎಂದರು.

ರೈತ ಮುಖಂಡ ಸಹದೇವ ರೆಡ್ಡಿ ಮಾತನಾಡಿ, ಕೆಂಪೇಗೌಡರು ಕೇವಲ ಪಾಳೆಗಾರರಲ್ಲ. ಬದಲಾಗಿ ಅವರೊಬ್ಬ ಚಿಂತಕರು ಹಾಗೂ ದಾರ್ಶನಿಕ ರಾಗಿ ಇಂದಿನ ಎಲ್ಲಾ ಜನಪ್ರತಿನಿಧಿಗಳಿಗೂ ಮಾದರಿ ಎಂದರು.

ಈ ಸಂದರ್ಭದಲ್ಲಿ ಶಿರಸ್ತೇದಾರರು ಸತೀಶ್,ಆರ್ ಐ ಮುನಿರಾಜು,ಈಶ್ವರ್,ಕಾರ್ಯದರ್ಶಿ ವೆಂಕಟೇಶ್, ಸೇರಿದಂತೆ ಒಕ್ಕಲಿಗ ಸಂಘದ ಮುಖಂಡರು ಇದ್ದರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!