———————-ಕೆಂಪೇಗೌಡರ ಪುತ್ಥಳಿ ಮೆರವಣಿಗೆ

ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ಕೆಂಪೇಗೌಡ ಬಡಾವಣೆಯಲ್ಲಿ ಬೆಂಗಳೂರು ನಿರ್ಮಾತೃ ನಾಡ ಪ್ರಭು ಕೆಂಪೇಗೌಡರ ೫೧೬ ನೇ ಜಯಂತೋತ್ಸವವನ್ನು ಯ ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಚೆನ್ನಕೇಶವ, ಅಧ್ಯಕ್ಷ ನರಸಿಂಹಮೂರ್ತಿ ಎಂ.ಎನ್(ಮಂಗಳ ವಾಟರ್), ಕಾರ್ಯದರ್ಶಿ ನಾಗರಾಜಪ್ಪ, ಉಪಾಧ್ಯಕ್ಷ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಜಂಟಿ ಕಾರ್ಯದರ್ಶಿ ಶಾಂತರಾಜು,ಸಹ ಕಾರ್ಯದರ್ಶಿ ಸತ್ಯನಾರಾಯಣ್, ಕಾರ್ಯದರ್ಶಿ ಅಶೋಕ್ ಬಾಬು, ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಗೌಡ, ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜು,ವಿಠಲ್ ಬಿರಾದಾರ್, ಖಜಾಂಚಿಗಳಾದ ಶ್ರೀನಿವಾಸ್, ಮಂಜುನಾಥ್ ಗೌಡ, ಕಾನೂನು ಸಲಹೆಗಾರ ಮಹಾದೇವಯ್ಯ, ಸಂಚಾಲಕರಾದ ಚಂದ್ರಶೇಖರ್,ರುದ್ರಯ್ಯ, ಮಧುಕರ್, ಕುಮಾರ್,ಕಾಳಪ್ಪ, ಜನಾರ್ದನ್, ರಾಮೇಗೌಡ, ಶಿವಕುಮಾರ್, ಲಕ್ಷ್ಮಿದೇವಿ ಸೇರಿದಂತೆ ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಾಡ ಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವ ಆಯೋಜಿಸಲಾಗಿದೆ.

ರಾಜಗೋಪಾಲ ನಗರದ ಶನೇಶ್ವರ ಸ್ವಾಮಿ ದೇವಸ್ಥಾನನಿಂದ ನಾಡ ಪ್ರಭು ಕೆಂಪೆಗೌಡರ ಪುತ್ಥಳಿಯನ್ನು ಮುತ್ತಿನ ಪಲ್ಲಕ್ಕಿ ಮೂಲಕ ರಾಜಗೋಪಾಲನಗರ ಮುಖ್ಯ, ಪೀಣ್ಯ 2ನೇಹಂತ ರಾಮಯ್ಯ ಬಡಾವಣೆ ಡೊಳ್ಳು ಕುಣಿತ ವಿವಿಧ ಕಲಾತಂಡಗಳೊಂದಿಗೆ ಕೆಂಪೇಗೌಡ ಬಡಾವಣೆಯ ಕಾರ್ಯ ಕ್ರಮದ ವೇದಿಕೆಗೆ ತಲುಪಿತು.
ಕ್ಷೇತ್ರದ ಶಾಸಕ ಎಸ್ ಮುನಿರಾಜು ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪ್ರಭಾವಿ ಯುವ ಮುಖಂಡ ನರಸಿಂಹಮೂರ್ತಿ (ಸಿಂಹ), ಕರ್ನಾಟಕ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎನ್ ಲಿಂಗೇಗೌಡ, ಅಧ್ಯಕ್ಷ ನರಸಿಂಹಮೂರ್ತಿ ಮಂಗಳವಾಟರ್ ಸೇರಿದಂತೆ ಮುಂತಾದವರು ಕೆಂಪೇಗೌಡರ ಪುತ್ಥಳಿ ಮಾಲಾರ್ಪಣೆ ಮಾಡಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಮಾತನಾಡಿ ಕೆಂಪೇಗೌಡರು ಸರ್ವ ಜನಾಂಗದ ಮಹಾನ್ ನಾಯಕ ಮತ್ತು ನಮ್ಮ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೃಹತ್ ಗಾತ್ರದ ಕೆಂಪೇಗೌಡರ ಪುತ್ಥಳಿ ಸ್ಥಾಪನೆ ಮಾಡಿದ್ದು ಕೀರ್ತಿ ಯಡಿಯೂರಪ್ಪ ಹಾಗೂ ನಾಡಿನ ಜನತೆಗೆ ಸಲ್ಲುತ್ತದೆ ಎಂದರು.

ಮಾಜಿ ಉಪ ಮೇಯರ್ ಪದ್ಮಾವತಿ ಅವರ ಪತಿ ಜೆಡಿಎಸ್ ಮುಖಂಡ ನರಸಿಂಹಮೂರ್ತಿ (ಸಿಂಹ), ಕೆ.ಎನ್ ಲಿಂಗೇಗೌಡ ಮಾತನಾಡಿದರು. ಕೈಗಾರಿಕಾ ಉದ್ಯಮಿ ಹಾಗೂ ಬಿಜೆಪಿ ಮುಖಂಡ ದಿನೇಶ್ ಮಾತನಾಡಿ ಈಗಾಗಲೇ ಸರ್ಕಾರದ ವತಿಯಿಂದ ನಾಡ ಪ್ರಭು ಕೆಂಪೆಗೌಡರ ಜಯಂತಿಯನ್ನು ಆಚರಿಸಲಾಗುತ್ತದೆ ಅದು ಸಂತೋಷ ಸಂಗತಿ ಆದರೆ ಜಯಂತಿಯಂದು ಸರ್ಕಾರ ರಜೆ ಘೋಷಿಸಬೇಕು ಎಂದು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು.
ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ನರಸಿಂಹಮೂರ್ತಿ ಮಂಗಳ ವಾಟರ್ ಸರ್ವರಿಗೂ ಸ್ವಾಗತಿಸಿದರು.
ಖ್ಯಾತ ಜಾನಪದ ಕಲಾವಿದ ಕುಣಿಗಲ್ ರಾಮಚಂದ್ರ ಕಾರ್ಯ ಕ್ರಮ ನಿರೂಪಣೆ ಮಾಡಿದರು.
ಇದೇ ವೇಳೆ ಹಿರಿಯ ನಾಯಕರಿಗೆ ಮತ್ತು ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಶ್ರೀಮತಿಯಂದರಿಗೆ ಶಾಲು ಹೊದಿಸಿ ಫಲಪುಷ್ಪ ದೊಂದಿಗೆ ಗೌರವಿಸಿದರು.
ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮಾಜಿ ಅಧ್ಯಕ್ಷ ನಾಗೇಶ್, ಬಿಜೆಪಿ ಯುವ ಮೋಹನ್ ಕುಮಾರ್, ಸಮಾಜ ಸೇವಕ ಹಾಗೂ ಚಿಂತಕ ಡಾ. ಸಂಗನಬಸಪ್ಪ ಬಿರಾದಾರ್, ಬಡಾವಣೆಯ ಹಿರಿಯ ಮುಖಂಡ ಮಹಿಳೆಯರು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




