ಯಳಂದೂರು: ತಾಲ್ಲೋಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಾಡ ಪ್ರಭು ಕೆಂಪೇಗೌಡ ಜಯಂತಿಯ ಕಾರ್ಯಕ್ರಮವನ್ನು ತಾಲ್ಲೋಕು ಕಛೇರಿ ಮುಂಭಾಗ ನೆಡೆಸಲಾಯಿತು.
ಕಾರ್ಯಕ್ರಮವನ್ನು ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೆತ್ರದ ಶಾಸಕರು ಎ ಆರ್ ಕೃಷ್ಣ ಮೂರ್ತಿ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು ಮುಖ್ಯ ಭಾಷಣಕಾರರಾದ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರೇಚಣ್ಣ ರವರು ಮಾತನಾಡಿದರು.
ಉದ್ಘಾಟನೆ ಮಾಡಿ ಶಾಸಕ ಎ ಆರ್ ಕೃಷ್ಣ ಮೂರ್ತಿ ರವರು ಮಾತನಾಡಿ ಈ ನಾಡ ರಾಜ್ಯಧಾನಿಯಾದ ಬೆಂಗಳೂರು ನಿರ್ಮಿಸಿದವರು ನಾಡ ಪ್ರಭು ಕೆಂಪೇಗೌಡರು ಎಂದು ತಿಳಿಸಿದರು ನೂತನ ತಹಸೀಲ್ದಾರಾದ ಶ್ರೀಮತಿ ನಯನ ರವರು ಎಲ್ಲರಿಗೂ ಶುಭಾಶಯ ಕೋರಿದರು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಸವರಾಜು, ಕ್ಷೇತ್ರ ಶಿಕ್ಷಣಧಿಕಾರಿ ಮಾರಯ್ಯ, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿಗಳಾದ ಮಹೇಶ್ ಕುಮಾರ್, ತಾಲೋಕು ಗ್ಯಾರಂಟಿ ಅಧ್ಯಕ್ಷರಾದ ಪ್ರಭು ಪ್ರಸಾದ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ರವರು, ಪಿ ಎಸ್ ಐ ಆಕಾಶ್, ಒಕ್ಕಲಿಗ ಸಂಘದ ಅಧ್ಯಕ್ಷರಾದ ಕೆ ಸಿ ಮಾದೇಶ, ಹಾಗೂ ಅಧಿಕಾರಿ ಸಿಬ್ಬಂದಿಗಳು ಮುಖಂಡರುಗಳು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




