Ad imageAd image

ಕೇರಳ ಭೂ ಕುಸಿತ ದುರಂತ : 330ಕ್ಕೆ ದಾಟಿದ ಸಾವಿನ ಸಂಖ್ಯೆ 

Bharath Vaibhav
ಕೇರಳ ಭೂ ಕುಸಿತ ದುರಂತ : 330ಕ್ಕೆ ದಾಟಿದ ಸಾವಿನ ಸಂಖ್ಯೆ 
WhatsApp Group Join Now
Telegram Group Join Now

ಕೇರಳ : ವಯನಾಡು ಭೂಕುಸಿತದಲ್ಲಿ ಇದುವರೆಗೆ 330 ಮಂದಿ ಬಲಿಯಾಗಿದ್ದು, ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಚೂರಲ್ಮಾಲಾ ಮತ್ತು ಮುಂಡಕ್ಕೈನಲ್ಲಿ ಭೂಕುಸಿತ ಸಂಭವಿಸಿದ್ದು, ಕೇರಳದಲ್ಲಿ ಶೋಕಾಚರಣೆ ಮಾಡಲಾಗಿದ್ದು, ಸಾವಿನ ಸಂಖ್ಯೆ ಈಗ 330 ದಾಟಿದೆ.

220 ಕ್ಕೂ ಹೆಚ್ಚು ಜನರು ಕಾಣೆಯಾಗಿರುವುದರಿಂದ ಈ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಸಂಜೆ 4 ಗಂಟೆಯವರೆಗೆ ಮುಂದುವರಿಯಬೇಕಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಗುರುವಾರ ಮೊಟಕುಗೊಳಿಸಲಾಯಿತು.

ಕೇರಳದಲ್ಲಿ ಭೂಕುಸಿತ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಜಿಲ್ಲಾಡಳಿತ ಮಾಹಿತಿ ನೀಡಿತ್ತು, ಈ ಹಿನ್ನೆಲೆ ಅವರು ನಿನ್ನೆ ಕೇರಳದ ವಯನಾಡಿಗೆ ಧಾವಿಸಿ ಅಲ್ಲಿನ ಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರು ಅಲ್ಲಿನ ಜನರಿಗೆ 100 ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!