Ad imageAd image

ರಾಜ್ಯ ಸರ್ಕಾರ ವಿರುದ್ಧ ಸ್ಪೀಕರ್ ಸಿಟ್ಟು : ಕಲಾಪದ ಸಮಯ ಹೇಳದೆ ಎದ್ದು ಹೊರನಡೆದ ಖಾದರ್

Bharath Vaibhav
ರಾಜ್ಯ ಸರ್ಕಾರ ವಿರುದ್ಧ ಸ್ಪೀಕರ್ ಸಿಟ್ಟು : ಕಲಾಪದ ಸಮಯ ಹೇಳದೆ ಎದ್ದು ಹೊರನಡೆದ ಖಾದರ್
WhatsApp Group Join Now
Telegram Group Join Now

ಬೆಂಗಳೂರು : ಕರ್ನಾಟಕ ವಿಧಾನಸಭೆಯಲ್ಲಿ ಇಂದು ಅಪರೂಪದ ಮತ್ತು ಆಘಾತಕಾರಿ ಘಟನೆ ನಡೆದಿದೆ. ಶಾಸಕರ ಲಿಖಿತ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದ ಕಾರಣ ಸ್ಪೀಕರ್ ಯು.ಟಿ. ಖಾದರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಲಾಪವನ್ನು ಸಮಯ ಹೇಳದೆ ಮುಂದೂಡಿ ಪೀಠದಿಂದ ಎದ್ದು ಹೊರನಡೆದರು.

‘ಸಚಿವರು ಉತ್ತರ ನೀಡದಿರಲು ಕಾರಣ ಹೇಳುವವರೆಗೂ ಸದನ ನಡೆಸುವುದಿಲ್ಲ’ ಎಂದು ಹೇಳಿ ಆಡಳಿತ ಪಕ್ಷಕ್ಕೆ ಚಾಟಿ ಏಟು ನೀಡಿದ್ದಾರೆ.

ಘಟನೆಯ ಹಿನ್ನೆಲೆ :

ವಿಧಾನಸಭೆಯ ಲಿಖಿತ ಪ್ರಶ್ನೆಗಳ ಉತ್ತರ ಮಂಡನೆ ವೇಳೆ ಸಚಿವ ಪರಮೇಶ್ವರ್ ಅವರು ಉತ್ತರಗಳನ್ನು ಮಂಡಿಸುತ್ತಿದ್ದರು.

ಒಟ್ಟು 230 ಲಿಖಿತ ಪ್ರಶ್ನೆಗಳ ಪೈಕಿ ಕೇವಲ 84 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗಿತ್ತು. ಆದರೆ ಉಳಿದ ಪ್ರಶ್ನೆಗಳಿಗೆ ಸಚಿವರು ಸರಿಯಾದ ಉತ್ತರ ನೀಡದೇ ತಪ್ಪಿಸಿಕೊಳ್ಳುತ್ತಿದ್ದರು ಎಂದು ವಿಪಕ್ಷದ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಸ್ಪೀಕರ್ ಯು.ಟಿ. ಖಾದರ್ ಅವರು ಸಭೆಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದರು. ‘ಸದನದಲ್ಲಿ ಎಲ್ಲಾ ಶಾಸಕರು ಪ್ರಶ್ನೆ ಕೇಳುತ್ತಾರೆ.

ಎಲ್ಲವೂ ಚುಕ್ಕೆ ಗುರುತಿನ ಪ್ರಶ್ನೆಗಳಲ್ಲ. ಗಮನ ಸೆಳೆಯುವ ಸೂಚನೆಗಳಿಗೂ ಸಚಿವರು ಉತ್ತರ ನೀಡುತ್ತಿಲ್ಲ. 3 ಬಾರಿ ಎಚ್ಚರಿಕೆ ನೀಡಿದರೂ ಸುಧಾರಣೆ ಇಲ್ಲ. ಸಂಬಂಧಿತ ಸಚಿವರು ಬಂದು ಸ್ಪಷ್ಟತೆ ನೀಡಬೇಕು. ಅಲ್ಲಿಯವರೆಗೆ ನಾನು ಸದನ ನಡೆಸುವುದಿಲ್ಲ’ ಎಂದು ಖಚಿತವಾಗಿ ಹೇಳಿ ಪೀಠದಿಂದ ಎದ್ದು ಹೊರನಡೆದರು.

ವಿಪಕ್ಷದ ತೀವ್ರ ಆಕ್ರೋಶ ವಿಪಕ್ಷ ನಾಯಕ ಆರ್. ಅಶೋಕ್ ಅವರು ಈ ಘಟನೆಯನ್ನು ಸರ್ಕಾರಕ್ಕೆ ದೊಡ್ಡ ಚಾಟಿ ಏಟು ಎಂದು ವರ್ಣಿಸಿದರು. ‘ಸರ್ಕಾರ ಹೆಣದಂತಾಗಿದೆ. ಸಿಎಂ ಹಿಡಿತ ಕಳೆದುಕೊಂಡಿದ್ದಾರೆ.

ಸಚಿವರು ಸದನಕ್ಕೆ ಬರುತ್ತಿಲ್ಲ. ಸ್ಪೀಕರ್ ಸಭಾತ್ಯಾಗ ಮಾಡಿದ್ದಾರೆ. ಸರ್ಕಾರ ಬದುಕಿದ್ದರೆ ಸಿಎಂ ಬಂದು ಕ್ಷಮೆ ಕೇಳಬೇಕು. ಮಾನ-ಮರ್ಯಾದೆ ಇದ್ದರೆ ಸಚಿವರು ರಾಜೀನಾಮೆ ನೀಡಬೇಕು’ ಎಂದಿದ್ದಾರೆ.

ಶಾಸಕ ಸುನೀಲ್ ಕುಮಾರ್ ಅವರು ‘ವಿಧಾನಸಭೆ ಇತಿಹಾಸದಲ್ಲೇ ಸರ್ಕಾರದ ಧೋರಣೆ ಖಂಡಿಸಿ ಸ್ಪೀಕರ್ ಪೀಠ ಬಿಟ್ಟು ಹೊರಹೋಗಿರುವುದು ಆಘಾತಕಾರಿ. 40 ದಿನಗಳ ಅಧಿವೇಶನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರವೇ ಬರುತ್ತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ದೊಡ್ಡ ಎಚ್ಚರಿಕೆ ಸ್ಪೀಕರ್ ಯು.ಟಿ. ಖಾದರ್ ಅವರ ಈ ನಿರ್ಣಯವು ಆಡಳಿತ ಪಕ್ಷಕ್ಕೆ ದೊಡ್ಡ ಎಚ್ಚರಿಕೆಯಾಗಿದೆ. ಸದನದಲ್ಲಿ ಸಚಿವರು ಉತ್ತರ ನೀಡದಿರುವುದು, ಶಾಸಕರ ಪ್ರಶ್ನೆಗಳನ್ನು ಗೌರವಿಸದಿರುವುದು ಮತ್ತು ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇದೀಗ ಸರ್ಕಾರ ಸಚಿವರು ಸದನಕ್ಕೆ ಬಂದು ಸ್ಪಷ್ಟ ಉತ್ತರ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!