Ad imageAd image

ಕಳ್ಳತನದಿಂದಲೇ ಮೂರು ಸೈಟ್ ಮತ್ತು ಒಂದು ಮನೆ ಕಟ್ಟಿದ್ದ ಖದೀಮ ಅರೆಸ್ಟ್ 

Bharath Vaibhav
ಕಳ್ಳತನದಿಂದಲೇ ಮೂರು ಸೈಟ್ ಮತ್ತು ಒಂದು ಮನೆ ಕಟ್ಟಿದ್ದ ಖದೀಮ ಅರೆಸ್ಟ್ 
WhatsApp Group Join Now
Telegram Group Join Now

ಬೆಂಗಳೂರು : ಈತ ಸಾಮಾನ್ಯ ಕಳನಲ್ಲ ಎಲ್ಲಿ ಮದುವೆ ನಡೆಯುತ್ತವೆಯೋ ಆ ಒಂದು ಕಲ್ಯಾಣ ಮಂಟಪಕ್ಕೆ ಅಥಿತಿಯಂತೆ ತೆರಳಿ ವಧು-ವರರ ಒಡವೆ ಕೊಠಡಿಗಳಿಗೆ ನುಗ್ಗಿ ಚೆನ್ನಾಭರಣ ದೋಚಿ ಅದೇ ಹಣದಿಂದ ಮೂರು ಸೈಟ್ ಮತ್ತು ಒಂದು ಮನೆ ಕಟ್ಟಿದ್ದ. ಮದುವೆ ನಡೆಯುವಾಗ ಕಲ್ಯಾಣ ಮಂಟಪಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿಯ ಪರಮೇಶ್ ಬಂಧಿತ ಆರೋಪಿ. ಈತನಿಂದ 400 ಗ್ರಾಂ ಚಿನ್ನಾಭರಣ, 91,000 ರೂ. ನಗದು ಸೇರಿ 36.91 ಲಕ್ಷ ರೂ.ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಅತಿಥಿ ಸೋಗಿನಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಹೋಗುತ್ತಿದ್ದ ಎನ್ನಲಾಗಿದೆ.

ಆರೋಪಿ ಮಾಂಗಲ್ಯ ಧಾರಣೆ ಸಂದರ್ಭದಲ್ಲಿ ವಧು, ವರನ ಕಡೆಯವರ ರೂಂ ಗೆ ಹೋಗಿ ನಗದು, ಚಿನ್ನಾಭರಣ ದೋಚಿ ಪರಾರಿ ಆಗುತ್ತಿದ್ದ. ಕದ್ದ ಆಭರಣಗಳನ್ನು ಮಾರಾಟ ಮಾಡುತ್ತಿದ್ದ. ಕಾಮಾಕ್ಷಿಪಾಳ್ಯ, ಕೆಂಗೇರಿ, ಬಸವನಗುಡಿ, ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಈತ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!