Ad imageAd image

ಖಾನಾಪುರ ಸಿಪಿಐ ಸಸ್ಪೆಂಡ್ : ಸಿದ್ದರಾಮಯ್ಯ ಸ್ಪಷ್ಟನೆ

Bharath Vaibhav
ಖಾನಾಪುರ ಸಿಪಿಐ ಸಸ್ಪೆಂಡ್ : ಸಿದ್ದರಾಮಯ್ಯ ಸ್ಪಷ್ಟನೆ
siddaramaiah
WhatsApp Group Join Now
Telegram Group Join Now

ಬೆಳಗಾವಿ : ಬಿಜೆಪಿಯ ಎಂಎಲ್​​​​ಸಿ ಸಿ.ಟಿ.ರವಿ ಅವರ ಬಂಧನ ಪ್ರಕರಣ ಸಂಬಂಧ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಬಿಜೆಪಿಯವರಿಗೆ ಪಕ್ಷದ ಮೀಟಿಂಗ್ ಮಾಡಲು ಸಿಪಿಐ ಅವಕಾಶ ಮಾಡಿಕೊಟ್ಟಿದ್ದರು.

ಈ ಕಾರಣಕ್ಕೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿಯವರು ಬಂದು ಪೊಲೀಸ್ ಠಾಣೆಯಲ್ಲಿ ಸಭೆ ಮಾಡಲು ಅವಕಾಶ ಇರುತ್ತಾ ಎಂದು ಸಿಎಂ ಪ್ರಶ್ನಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಮೀಟಿಂಗ್​​​​​​ ಮಾಡಲು ಅವಕಾಶ ಕೊಡಬಾರದಿತ್ತು.

ರಾಜಕೀಯ ಮುಖಂಡರು ಪೊಲೀಸ್​​ ಠಾಣೆಗೆ ಪ್ರವೇಶ ಮಾಡಿದ್ದಕ್ಕೆ ಮತ್ತು ಅಧಿಕಾರಿಯ ಕರ್ತವ್ಯ ಲೋಪದ ಆರೋಪದಡಿ ಸಸ್ಪೆಂಡ್​ ಮಾಡಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

ಪರಿಷತ್​​​​ನಲ್ಲಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಪದ ಬಳಿಸಿದ್ದಾರೆಂಬ ಆರೋಪದಡಿ, ಹಿರೇಬಾಗೇವಾಡಿ ಠಾಣೆಯಲ್ಲಿ ರವಿ ವಿರುದ್ಧ ಎಫ್​​​​ಐಆರ್​ ಕೂಡ ದಾಖಲಾಗಿತ್ತು. ಈ ಬೆಳವಣಿಗೆ ಬಿಜೆಪಿ-ಕಾಂಗ್ರೆಸ್​​​ ನಡುವಣ ಸಂಘರ್ಷಕ್ಕೆ ಎಡೆ ಮಾಡಿ ಕೊಟ್ಟಿದ್ದು ಗೊತ್ತೇ ಇದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!