ಮೈಸೂರು: ಸಿಎಂ ಸ್ಥಾನ ಕೈತಪ್ಪಿದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಸರಿಯಾದ ಸಮಯದಲ್ಲಿ ಖರ್ಗೆ ಕಲ್ಲು ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆರ್ ಅಶೋಕ್, ಮಲ್ಲಿಕಾರ್ಜುನ ಖರ್ಗೆ ಅವರು ಸರಿಯಾದ ಸಮಯದಲ್ಲಿ, ಸರಿಯಾದ ಜಾಗದಲ್ಲಿ ಕಲ್ಲು ಹೊಡೆದಿದ್ದು, ಮಾವಿನಕಾಯಿ ಉದುರಿ ಬೀಳಲಿದೆಯೇ ನೋಡೋಣ ಎಂದಿದ್ದಾರೆ.
ಅಲ್ಲದೇ, ಡಿಕೆ ಶಿವಕುಮಾರ್ ಅವರು ವರ ಕೊಡುವ ದೇವರನ್ನು ಹುಡುಕುತ್ತಿದ್ದಾರೆ. ದೇವರನ್ನು ಹುಡುಕಿಕೊಂಡು ಅವರು ಹೋಗುತ್ತಿದ್ದಾರೆ ಎಂದು ಅಶೋಕ್ ಹೇಳಿದ್ದು, ಈ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.