ಸೇಡಂ: ತಾಲೂಕಿನ ಶೀಲಾರಕೊಟ್ ಗ್ರಾಮದಲ್ಲಿ ಶಾಲೆ ಮಕ್ಕಳಿಗೆ ವಿಶೇಷವಾದ ಪರೀಕ್ಷೆ ಪ್ಯಾಡ್ ನೀಡುವುದರ ಮೂಲಕ ಎಐಸಿಸಿ ಅದ್ಯಕ್ಷರು ಹಾಗೂ ರಾಜ್ಯಸಭಾ ವಿರೋಧಪಕ್ಷ ನಾಯಕರಾದ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ ಜನ್ಮ ದಿನಾಚರಣೆ ಆಚರಣೆ ಮಾಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ನಾಯಕರು ಶ್ರೀನಿವಾಸ್ ರೆಡ್ಡಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಡಾ.ಮಲ್ಲಿಕಾರ್ಜುನ ಖರ್ಗೆಯವರು ನೀಡಿರುವ ಕೊಡುಗೆಗಳು ಅತ್ಯಂತ ಅಮೂಲ್ಯವಾಗಿವೆ. ಅಷ್ಟೇ ಅವರು ನಮ್ಮಂತ ಯುವ ನಾಯಕರಿಗೆ ಮಾದರಿಯಾಗಿದ್ದಾರೆ.
ಅಂತಹ ಒಬ್ಬ ನಾಯಕರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸುತ್ತೇವೆ ಎಂದು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡರಾದ ಮಹಿಪಾಲ್ ರೆಡ್ಡಿ ಆಕುದೋಟ ನಮ್ಮ ಕಲ್ಯಾಣ ಕರ್ನಾಟಕ ಅದರಲ್ಲಿ ವಿಶೇಷವಾಗಿ ಕಲಬುರಗಿ ಜಿಲ್ಲೆ ಅಭಿವೃದ್ಧಿಯಲ್ಲಿ ಅತ್ಯುತ್ತಮವಾಗಿದೆ ಎಂದರೆ ಅದು ಕೇವಲ ನಮ್ಮ ನೆಚ್ಚಿನ ನಾಯಕರಾದ ಡಾ.ಮಲ್ಲಿಕಾರ್ಜುನ್ ಖರ್ಗೆ ಮತ್ತು ನಮ್ಮ ಜನಪ್ರಿಯ ಶಾಸಕರು ಹಾಗೂ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಕಾರಣವಾಗಿದ್ದರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಇಂತಹ ಒಬ್ಬ ಮಹಾನ್ ನಾಯಕನನ್ನು ಪಡೆದ ನಾವೇಷ್ಟೂ ಧನ್ಯರು ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವ ನಾಯಕರಾದ ಶ್ರೀನಿವಾಸ್ ರೆಡ್ಡಿ ಪಾಟೀಲ್, ಮಹಿಪಾಲ್ ರೆಡ್ಡಿ, ಪ್ರಕಾಶ್ ಗೌಡ, ರಾಮಕೃಷ್ಣ ಹಡಪದ್, ಬಾಲಪ್ಪ ತಲ್ವಾರ್, ನರೇಶ್ ಸೌಕರ್, ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಪುಷ್ಪ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಈರಪ್ಪ ಪೂಜಾರಿ, ಸಹ ಶಿಕ್ಷಕರಾದ ಅಶೋಕ್, ರಮೇಶ್ ಮತ್ತು ಶಾಲೆಯ ಮುದ್ದು ಮಕ್ಕಳು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




