ಚಿಕ್ಕೋಡಿ: ಚಿಕ್ಕೋಡಿ ಹಣಬರ ಯಾದವ್, ಗೊಲ್ಲ, ಸಮಾವೇಶದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕರಾದ ಮಾಜಿ ಎಂ ಎಲ ಸಿ ಶ್ರೀ ಮಹಾಂತೇಶ್ ಕವಟಗಿಮಠ ಹಾಗೂ ರಾಯಬಾಗ ಕ್ಷೇತ್ರದ ಹಾಲಿ ಶಾಸಕರಾದ ದುರ್ಯೋಧನ ಐಹೊಳೆ ಇವರು ಕೂಡ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಮಾವೇಶ ನಮ್ಮ ಚಿಕ್ಕೋಡಿಯಲ್ಲಿ ಇಷ್ಟೊಂದು ಈ ಹಣಬರ, ಯಾದವ್, ಗೊಲ್ಲ, ಜನಸಂಖ್ಯೆ ಇರುವುದು ನಮಗೆ ಆನಂದ ತಂದಿದೆ ಎಂದರು ಹಾಗಾಗಿ ಈ ಸಂಘಟನೆಗೆ ಇನ್ನು ಮುಂದೆ ಮಹತ್ವ ಕೊಡುವುದಾಗಿ ಭರವಸೆ ನೀಡಿದರು.
ಗೋಕಾಕ್ ತಾಲೂಕಿನ ಬಗರನಾಳ ಗ್ರಾಮದ, ಯಮಕನಮರಡಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ ಮಂಜುನಾಥ ಪಾಟೀಲ್ ಇವರು ಮಾತನಾಡಿ ನಮ್ಮ ಸಮಾಜಕ್ಕೇ ನೂರು ವರ್ಷಗಳ ಶತಮಾನೋತ್ಸವ ಈ ಸಮಾವೇಶ ನಮ್ಮ ಸಮಾಜವನ್ನು ಇಡೀ ದೇಶದಲ್ಲಿ ಎಬ್ಬಿಸಿ ತೋರಿಸಿದೆ ಇನ್ನು ಮುಂದೆ ನಮ್ಮ ಬೇಡಿಕೆಗಳೆಲ್ಲ ಇಡೆರುತ್ತವೆ ಎಂದರು.
ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಇವರು ಈ ಐತಿಹಾಸಿಕ ಒಂದು ನೂರು ವರ್ಷಗಳ ಶತಮಾನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಈ ಸಮಾಜವನ್ನು ಇಡೀ ದೇಶಕ್ಕೆ ಎತ್ತಿ ತೋರಿಸುವುದು ನಮ್ಮ ಕರ್ತವ್ಯವಾಗಿತ್ತು ಅದರಂತೆ ಈ ಕಾರ್ಯಕ್ರಮ ಸಹಸ್ರಾರು ಸಮಾಜದ ಜನರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು ಇನ್ನು ಮುಂದೆ ಈ ಸಮಾಜ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರೋಶಿಯ ಮುಂಡೆ, ಸಿಂಗಾಯಿ ,ಕರ್ನೂರೆ, ಬಗರನಾಳ ಪಾಟೀಲ, ಹನಬರ ಸಮಾಜದ ಎಲ್ಲ ಯುವಕರು, ಯುವತಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ