
ಚಿಕ್ಕೋಡಿ: ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಶಿವಯೋಗ ಮಂದಿರದ ಅಧ್ಯಕ್ಷರಾದ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಡಾ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಶಿವಯೋಗ ಮಂದಿರದ ಉಪಾಧ್ಯಕ್ಷರಾದ ಹಾವೇರಿ ಮಠದ ಶ್ರೀ ಮ ನಿ ಪ್ರ ಸ್ವ ಸದಾಶಿವ ಮಹಾಸ್ವಾಮಿಗಳವರ ಹಾಗೂ ಭಕ್ತರ ಮಹತ್ವದ ಸಭೆ ಜರುಗಿತು.
ಗಡಿಭಾಗದ ಕನ್ನಡ ಮಠ ಚಿಂಚಣಿ ಸಿದ್ದಸಂಸ್ಥಾನ ಮಠದ 10 ನೇ ಪೀಠಾಧಿಕಾರಿಗಳಾಗಿ ಪ್ರವಚನ ಪಟು,ಕುಮಾರೇಶನ ವರಪುತ್ರ ಪ ಪೂ ಶಿವಪ್ರಸಾದ ದೇವರನ್ನು ಆಯ್ಕೆ ಮಾಡಲಾಯಿತು.
ಚಿಂಚಣಿಯ ಲಿಂಗೈಕ್ಯ ಶ್ರೀ ಅಲ್ಲಮಪ್ರಭುದೇವರ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಕುರಿತು ಇವತ್ತು ಗ್ರಾಮದ ಸುಮಾರು 40 ಲಘು ವಾಹನಗಳಲ್ಲಿ ಅಂದಾಜು 500 ಜನ ಭಕ್ತರು ಸೇರಿ ಹುಬ್ಬಳ್ಳಿ ಮೂರು ಸಾವಿರ ಮಠದ ಪರಮಪೂಜ್ಯರಿಗೆ ಭೇಟಿಯಾಗಿ ಅವರ ಮಠದಲ್ಲೇ ವ್ಯಾಸಂಗ ಮಾಡಿದ ಶ್ರೀ ಶಿವಪ್ರಸಾದ ಸ್ವಾಮೀಜಿಗಳನ್ನು ಚಿಂಚಣಿ ಅಲ್ಲಮಪ್ರಭು ಮಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
ಆಯ್ಕೆಯಾದ ನೂತನ ಪೂಜ್ಯರಿಗೆ ಅಭಿನಂದನೆಗಳು ನಿಮ್ಮ ಸಾರಥ್ಯದಲ್ಲಿ ಕನ್ನಡ ಮಠದ ಪರಂಪರೆ, ಸಾಹಿತ್ಯ,ಸಂಸ್ಕೃತಿ ಎತ್ತಿ ಹಿಡಿಯಿರಿ ಈ ಸಂದರ್ಭದಲ್ಲಿ ಬಿಚಕಲ್ ವಿರಕ್ತಮಠದ ಶ್ರೀ ಮ ನಿ ಪ್ರ ಸ್ವ ಶಿವಲಿಂಗ ಮಹಾಸ್ವಾಮಿಗಳು ಸಹಿತ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




