ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಳಿ ಸುತ್ತಮುತ್ತಲಿನ ರೈತರು ನೀರಿನ ಸಮಸ್ಯೆ ನೀಗಿಸಲು ರೊಚ್ಚಿಗೆದ್ದು ದೂಧಗಂಗಾ ನದಿಯ ಕಾರದಗಾ-ಭೋಜ ಬ್ಯಾರಜ್‌ಗೆ ನೀರು ತಡೆಯಲು ಬಾಗಿಲು ಹಾಕಿ, ಕಾಳಮಾವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಅಲ್ಲದೆ ಅಳವಡಿಸಿದ ಬಾಗಿಲನ್ನು ತಗೆಯಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತದೆ. ವೇದಗಂಗಾ ಮತ್ತು ದೂಧಗಂಗಾ ನದಿಯಲ್ಲಿ ನೀರಿಲ್ಲದ ಕಾರಣ ಬೆಳೆಗಳು ಕಮರಿಗುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಬಂದೋದಗುತ್ತಿದೆ. ಬ್ಯಾರೆಜ್ ಬಾಗಿಲುಗಳು ತಗೆದಿರುವುದರಿಂದ ನೀರು ನಿಲ್ಲುವುದಿಲ್ಲ. ಬಾಗಿಲು ಹಾಕಿದರೆ ಸಿದ್ದ್ನಾಳ ಬ್ಯಾರೇಜ್ ವರೆಗೆ ನೀರು
ನಿಲ್ಲುತ್ತವೆ. ಕಾರದಗಾ-ಭೋಜ ಬ್ಯಾರೇಜ್ ಬಾಗಿಲುಗಳನ್ನು ತಗೆದಿರುವುದರಿಂದ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ರೈತರು ತಿಳಿಸಿದರು.
ನೀರಾವರಿ ಇಲಾಖೆಯ ಅಧಿಕಾರಿ ಲಮಾಣಿ ಇವರಿಗೆ ಸಂಪರ್ಕಿಸಿ ನೀರು ಬಿಡುವುದರ ಜೊತೆಗೆ ಅಳವಡಿಸಿದ ಬಾಗಿಲನ್ನು ತಗೆಯದಂತೆ ರೈತರು ಸೂಚಿಸಿದರು.
ಹುನ್ನರಗಿ ಗ್ರಾಪಂ ಅಧ್ಯಕ್ಷ ಮಹಾಂತೇಶ ಪಾಟೀಲ, ಅಮರ ಸ್ವಾಮಿ, ಸುರಜ ಕಲ್ಲೆದಾರ, ಆನಂದಾ ನೇಜೆ, ಉದಯ ಪಾಟೀಲ, ಸಂತೋಷ ಅಂಕಲಿ, ಅಶೋಕ ಗೌರಾಯಿ, ಶೇಖರ ಪಾಟೀಲ, ಶಾಹನೂರ ಝಾಲಿ, ಸಂಜಯ ಕುಲಕರ್ಣಿ, ದೀಪಕ ಕುಲಕರ್ಣಿ ಸೇರಿದಂತೆ ಹುನ್ನರಗಿ, ಸಿದ್ದಾಳ, ಖಡಕಲಾಟ, ಪಟ್ಟಣಕುಡಿ, ಮಮದಾಪುರ, ಗಳತಗಾ ಸೇರಿದಂತೆ ವಿವಿಧ ಗ್ರಾಮದ ರೈತರು ಭಾಗವಹಿಸಿದ್ದರು.
ವರದಿ: ರಾಜು ಮುಂಡೆ ಚಿಕ್ಕೋಡಿ