Ad imageAd image

ಅದ್ದೂರಿಯಾಗಿ ಕಿಂಡರ್ ಕೇರ್ ಪ್ರಿ ಸ್ಕೂಲ್ ವಾರ್ಷಿಕೋತ್ಸವ

Bharath Vaibhav
ಅದ್ದೂರಿಯಾಗಿ ಕಿಂಡರ್ ಕೇರ್ ಪ್ರಿ ಸ್ಕೂಲ್ ವಾರ್ಷಿಕೋತ್ಸವ
WhatsApp Group Join Now
Telegram Group Join Now

ಹೊಸಪೇಟೆ: ಹೊಸಪೇಟೆ ನಗರದಲ್ಲಿ ಪಟೇಲ್ ನಗರದಲ್ಲಿರುವ ಪ್ರತಿಷ್ಠಿತ ಕಿಂಡರ್ ಕೇರ್ ಪ್ರಿ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಗರದ ಪುನೀತ್ ಒಳಾಂಗಣ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಮತ್ತು ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಮತ್ತು ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿದವು. ವಿವಿಧ ಹಾಡುಗಳ ನೃತ್ಯಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದವು. ಪೋಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಸಂತೋಷದಿಂದ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಧಾಕರ್ ರೆಡ್ಡಿ,ಮಾತನಾಡುತ್ತಾ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡುತ್ತವೆ ಎಂದು ಹೇಳಿದರು. ಪ್ರತಿಭೆಯನ್ನು ತೋರಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ್ ಬೆನ್ನಿ, ನಿರ್ದೇಶಕ ಎಸ್. ಕವಿತಾ, ಮೋಸೆಸ್ ಪ್ರಶಾಂತ್, ಮುಖ್ಯಗುರುಗಳು ಶ್ರೀಮತಿ ಮುಕ್ತಾ ಆಲದಕಟ್ಟಿ, ಶಿಕ್ಷಕಿಯರಾದ ವನಜಾಕ್ಷಿ, ಸವಿತಾ, ವಿದ್ಯಾರ್ಥಿಗಳ ಪೋಷಕರು ಮತ್ತು ಇತರರು ಭಾಗವಹಿಸಿದ್ದರು.

ವರದಿ:ಪಿ ಶ್ರೀನಿವಾಸ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!