Ad imageAd image

​ಕಿರಣ್ ಕುಮಾರ್ ಗ್ರಾಮ ಆಡಳಿತ ಸಂಘಕ್ಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

Bharath Vaibhav
​ಕಿರಣ್ ಕುಮಾರ್ ಗ್ರಾಮ ಆಡಳಿತ ಸಂಘಕ್ಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
WhatsApp Group Join Now
Telegram Group Join Now

ಕಿರಣ್ ಕುಮಾರ್ ಅವರು ಒಬ್ಬ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಮತ್ತು ಸಂಘಟನಾ ಚತುರ ವ್ಯಕ್ತಿ ಎಂದ..
ಪಾವಗಡ ಶಾಖೆ ಸರ್ಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ರವಿ ಕುಮಾರ್ ಹೆಚ್. ವಿ.

​ಪಾವಗಡ : ತಾಲೂಕಿನಲ್ಲಿರುವ ಸರ್ಕಾರಿ ನೌಕರ ಸಂಘದ ಕಚೇರಿಯಲ್ಲಿ. ಜಿಲ್ಲಾ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಾವಗಡ ತಾಲೂಕಿನ ಕಿರಣ್ ಕುಮಾರ್ ಎಚ್. ಅವರು ಆಯ್ಕೆಯಾಗಿರುವುದಕ್ಕೆ ಪಾವಗಡ ತಾಲೂಕಿನ ಸರ್ಕಾರಿ ನೌಕರ ಸಂಘದ ವತಿಯಿಂದ ಸನ್ಮಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಮ್ಮ ತಾಲ್ಲೂಕಿಗೆ ಸಂದ ಗೌರವ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ. ರವಿ ಕುಮಾರ್ ಹೆಚ್. ವಿ. ವ್ಯಕ್ತಪಡಿಸಿದ್ದಾರೆ.

​ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, “ಕಿರಣ್ ಕುಮಾರ್ ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದು, ಅವರ ಸಂಘಟನಾ ಚತುರತೆ ಸಂಘಕ್ಕೆ ಮತ್ತಷ್ಟು ಬಲ ನೀಡಲಿದೆ. ಜಿಲ್ಲಾ ಮಟ್ಟದಲ್ಲಿ ಅವರ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ,” ಎಂದರು.

​ಇದೇ ಸಂದರ್ಭದಲ್ಲಿ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ರಂಜಿತ್ ಕುಮಾರ್ ಮಾತನಾಡಿ, “ಕಿರಣ್ ಅವರ ಸಂಘಟನಾ ಶೈಲಿ ಶ್ಲಾಘನೀಯ. ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಜಿಲ್ಲಾಧ್ಯಕ್ಷರಾದ ಎಸ್. ದೇವರಾಜು ಅವರ ನಿರ್ಧಾರ ಸೂಕ್ತವಾಗಿದೆ. ಮುಂದಿನ ದಿನಗಳಲ್ಲಿ ಇವರ ನೇತೃತ್ವದಲ್ಲಿ ನೌಕರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗಲಿ,” ಎಂದು ಶುಭ ಹಾರೈಸಿದರು.

ಇದೇ ವೇಳೆಯಲ್ಲಿ ​ಗ್ರಾಮ ಆಡಳಿತಾಧಿಕಾರಿಗಳ ಸಂಘದ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ ಮಾತನಾಡಿ.

ನಾನು ​ನೌಕರರ ಹಿತರಕ್ಷಣೆ ಮತ್ತು ಸಂಘಟನೆಯ ಬಲವರ್ಧನೆಗೆ ಒತ್ತು. ನೀಡುತ್ತೇನೆ. ಹಾಗೂ ತುಮಕೂರು ಜಿಲ್ಲೆಯ ನೌಕರ ಸಮಸ್ಯೆಗಳಿಗೆ ಅವರ ಬೆನ್ನು ಬಾಗಿಲಿಗೆ ನಿಂತು ನಾನು ಕೆಲಸ ಮಾಡಿಕೊಂಡು ಹಾಗೂ ಸಂಘಟನೆಗೆ ಒತ್ತು ನೀಡಿ ಗ್ರಾಮ ಆಡಳಿತ ಸಂಘವನ್ನು ಜಿಲ್ಲಾಧ್ಯದಂತ ಸಂಘಟನೆ ಮಾಡುತ್ತೇನೆಂದು ಭರವಸೆ ನೀಡಿರುತ್ತಾರೆ .

ಇದೇ ಸಮಾರಂಭದಲ್ಲಿ ಸರ್ಕಾರಿ ನೌಕರರಾದ ಪಾವಗಡ ತಾಲೂಕಿನ ಕಾರ್ಯದರ್ಶಿಯಾದ ಮಾರುತೇಶ್. ಅವರು ಮಾತನಾಡಿ. ಕಿರಣ್ ಕುಮಾರ್ ಅವರು ಒಬ್ಬ ಅತ್ಯಂತ ಕ್ರಿಯಾಶೀಲ ಮತ್ತು ಸಂಘಟನಾ ಚತುರ ವ್ಯಕ್ತಿಯಾಗಿದ್ದು, ಗ್ರಾಮ ಆಡಳಿತಾಧಿಕಾರಿಯಾಗಿ ಅವರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಅವರ ಈ ಹೊಸ ಜವಾಬ್ದಾರಿಯು ಸಂಘಕ್ಕೆ ಮತ್ತಷ್ಟು ಬಲ ತರಲಿದೆ.

ನಮ್ಮ ತಾಲೂಕಿಗೆ ಗೌರವ: ನಮ್ಮ ತಾಲೂಕಿನ ಅಧಿಕಾರಿಯೊಬ್ಬರು ಜಿಲ್ಲಾ ಮಟ್ಟದಲ್ಲಿ ದೊಡ್ಡ ಜವಾಬ್ದಾರಿಯನ್ನು ಹೊಂದಿರುವುದು ನಮಗೆಲ್ಲರಿಗೂ ಅತ್ಯಂತ ಸಂತೋಷದ ವಿಚಾರ. ಅವರು ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಸಂಘದ ಸಹಕಾರ.

ಕಿರಣ್‌ ಕುಮಾ‌ರ್ ಅವರು ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ನಮ್ಮ ಪೂರ್ಣ ಬೆಂಬಲವಿರುತ್ತದೆ ಎಂದು ತಿಳಿಸಿದರು.

ಈ ವೇಳೆಯಲ್ಲಿ.ರಾಜ್ಯ ಪರಿಷತ್ತು ಸದಸ್ಯ ಗಂಗಾಧರ. ಸಂಘದ ಖಜೆನ್ಸಿ ಶೇಖರ್ ಬಾಬು.ಸಂಘದ ಉಪಾಧ್ಯಕ್ಷ. ಗಂಗಾಧರ. ಹಿರಿಯ ಉಪಾಧ್ಯಕ್ಷ. ನಾಗರಾಜ್ ಎಚ್. ಕ್ರೀಡಾ ಕಾರ್ಯದರ್ಶಿ. ರಿಜ್ವಾನ್. ಇನ್ನು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ : ಶಿವಾನಂದ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!