ಸೇಡಂ : ತಾಲೂಕಿನ ಕಿಷ್ಟಪುರ ಗ್ರಾಮದ ಮಾದಿಗ ಸಮುದಾಯಕ್ಕೆ ವಿವಿಧ ರೀತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಕಿಷ್ಟಪುರ ಮಾದಿಗ ಸಮಾಜದ ಮುಖಂಡರು ಆಗ್ರಹ ವ್ಯಕ್ತಪಡಿಸಿದರು.
೨೦೧೬ನೇ ಸಾಲಿನಲ್ಲಿ ಬಂದಿರುವ ಸಮಾಜ ಕಲ್ಯಾಣ ಇಲಾಖೆಯ ಸಮುದಾಯ ಭವನ ನಿರ್ಮಾಣವಾಗಿದ್ದು ಅದನ್ನು ರೇಷನ್ ಅಂಗಡಿಯಾಗಿ ಉಪಯೋಗಿಸುತ್ತಾರೆ. ಅದರಲ್ಲಿ ವಿದ್ಯುತ್ ತೊಂದರೆ ಇದೆ ಹಾಗೂ ಒಂದು ಸಣ್ಣ ಫ್ಯಾನ್ ಕೂಡ ಅಳವಡಿಸಿಲ್ಲ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಸಮುದಾಯ ಭವನಕ್ಕೆ ವಿದ್ಯುತ್ ವ್ಯವಸ್ಥೆ ಸರಿಪಡಿಸುವಂತೆ ಮತ್ತು ಸುಣ್ಣ ಬಣ್ಣ ಹಾಕಿಸುವಂತೆ ಅದೆಷ್ಟೋ ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಅದ್ಯಕ್ಷರು ಯಾರು ಕೂಡ ಕ್ಯಾರೇ ಎನ್ನುತ್ತಿಲ್ಲ.
ಅಷ್ಟೇ ಅಲ್ಲದೆ ನಮ್ಮ ಗ್ರಾಮದ ಮಾದಿಗ ಸಮುದಾಯಕ್ಕೆ ಕಳೆದ ಅನೇಕ ವರ್ಷಗಳಿಂದ ಸರ್ಕಾರದಿಂದ ಬರುವ ಗ್ರಾಮ ಪಂಚಾಯಿತಿ ಅನುದಾನವಾಗಳಿ, ತಾಲೂಕ ಪಂಚಾಯತ್ ಅನುದನವಾಗಳಿ, ಜಿಲ್ಲಾ ಪಂಚಾಯತ್ ಅನುದಾನವಾಗಳಿ ಮತ್ತು ಶಾಸಕರ ಅನುದಾನವಾಗಳಿ,ಯಾವುದೇ ರೀತಿಯ ಮಾದಿಗ ಸಮುದಾಯದ ವಿಶೇಷ ಅನುದಾನದ ಯೋಜನೆಗಳು ಮತ್ತು ಮನೆಗಳು ನೀಡಿಲ್ಲ.
ಗ್ರಾಮ ಪಂಚಾಯತಿ ಅದ್ಯಕ್ಷರು ಊರಿನವರೇ ಆಗಿದ್ದರು ನಮ್ಮ ಊರಿನ ಮಾದಿಗ ಸಮುದಾಯಕ್ಕೆ ಅನುದಾನ ನೀಡುವಲ್ಲಿ ದೋರಣೆ ತೋರುತ್ತಿದ್ದಾರೆ ಎಂದು ಕಿಷ್ಟಪುರ ಮಾದಿಗ ಸಮಾಜದ ಮುಖಂಡರು ವ್ಯಕ್ತಪಡಿಸಿದರು. ಗ್ರಾಮ ಸಭೆಯಲ್ಲಿ ಅವರದ್ದೇ ಕೊನೆಯ ತೀರ್ಮಾನ ಎಂಬಂತೆ ಆಗಿದೆ. ಕಾರಣ ನಮ್ಮ ಮಾದಿಗ ಸಮಾಜದಿಂದ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ಕೂಡ ಇಲ್ಲದಿರುವುದು ಎಂಬುದೇ ನಮ್ಮ ವ್ಯಯಕ್ತಿಕ ಅನುಮಾನವಾಗಿದೆ. ಕೇವಲ ನಮ್ಮನ್ನು ಚುನಾವಣೆ ಸಮಯದಲ್ಲಿ ಮಾತ್ರ ಬಳಸಿಕೊಳ್ಳುತ್ತಾರೆ ಚುನಾವಣೆ ನಂತರ ಮತ್ತೆ ನಮ್ಮ ಸಮಾಜದ ಕಡೆ ಗಮನ ಕೊಡುವುದಿಲ್ಲ ಎಂದು ಸಮುದಾಯದ ಮುಖಂಡರು ತಮ್ಮ ಅಸಮಾಧಾನ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




